ಪಂಜ:ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಹಸಿರು ಕಾಣಿಕೆ ಸಮರ್ಪಣೆ ನಡೆಯಿತು. ವೈಭವದ ಹಸಿರುವಾಣಿ ಮೆರವಣಿಗೆ ಮನ ಸೆಳೆಯಿತು. ಹಸಿರು ಕಾಣಿಕೆ ಮೆರವಣಿಗೆ ಪುತ್ಯ ಕಟ್ಟೆಯಿಂದ ಆರಂಭಗೊಂಡು
ದೇವಳಕ್ಕೆ ಸಮರ್ಪಣೆ ಗೊಂಡಿತು. ದೈವದ ಮಧ್ಯಸ್ಥ ತಿಮ್ಮಪ್ಪ ಗೌಡ ಪುತ್ಯರವರು ಪ್ರಾರ್ಥಿಸಿ ಬಳಿಕ ತೆಂಗಿನ ಕಾಯಿ ಒಡೆದು ಮೆರವಣಿಗೆ ಆರಂಭಗೊಂಡಿತು. ಉತ್ಸವ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಹಸಿರು ವಾಣಿ ಸಂಚಾಲಕರಾದ ಪವನ್ ಪಲ್ಲತ್ತಡ್ಕ, ಶರತ್ ಕುದ್ವ , ಉತ್ಸವ ಸಮಿತಿ ಸದಸ್ಯರು,ವ್ಯವಸ್ಥಾಪನಾ ಸಮಿತಿ ನಿಕಟ ಪೂರ್ವ

ಅಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲುಗುತ್ತು,
ವಿವಿಧ ಸಮಿತಿಗಳ ಸಂಚಾಲಕರು ಸದಸ್ಯರು, ಸೀಮೆಯ ಭಕ್ತಾದಿಗಳು ಪಾಲ್ಗೊಂಡಿದ್ದರು. ಹಸಿರು ಕಾಣಿಕೆ ಮೆರವಣಿಗೆಯಲ್ಲಿ ರಾಜ್ಯ ಪ್ರಶಸ್ತಿ ವಿಜೇತ ರಮೇಶ್ ಕಲ್ಲಡ್ಕ ರವರ ಶಿಲ್ಪ ಗೊಂಬೆ ಬಳಗದಿಂದ ಕೀಲು ಕುದುರೆ , ಕರಗೃತ್ಯ,ಗೊಂಬೆಯಾಟ , ಬಣ್ಣದ ಕೊಡೆಗಳು ಹಾಗೂ ಬ್ಯಾಂಡ್ ವಾಲಗ, ಚೆಂಡೆ , ನೂರಾರು ವಾಹನಗಳ ಸಾಲು ವಿಶೇಷ ಆಕರ್ಷಣೆಯಾಗಿತ್ತು.










