ಪಂಜ:ಪಂಜ ಸಾವಿರ ಸೀಮೆ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಧನುರ್ಮಾಸದ ಒಂದು ತಿಂಗಳ ಕಾಲ ನಡೆದ ಧನು ಪೂಜೆ ಜ.14ರಂದು ಸಂಪನ್ನಗೊಂಡಿತು.ಡಿ.16 ರಂದು ಆರಂಭಗೊಂಡು ಜ.14ರ ತನಕ ಮುಂಜಾನೆ 5.30ಕ್ಕೆ ನಡೆದ ಧನುಪೂಜೆಯಲ್ಲಿ

ಪ್ರತಿ ದಿನ ನಾರಾರು ಮಂದಿ ಭಕ್ತರು ಆಗಮಿಸುತ್ತಿದ್ದರು. ಕೊನೆಯ ದಿನವಾದ ಇಂದು ದೇವಸ್ಥಾನದಲ್ಲಿ ನೂರಾರು ಮಂದಿ ಭಕ್ತರು ಆಗಮಿಸಿದ್ದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರರು ಉಪಸ್ಥಿತರಿದ್ದರು. ಇಂದು ಮಕರ ಸಂಕ್ರಮಣ ಪ್ರಯುಕ್ತ ದೇಗುಲದ ಕೋಟಿ ಚೆನ್ನಯ್ಯ ಗರಡಿಯಲ್ಲಿ ಹಾಗೂ ದೇಗುಲದ ಎದುರು ದೈವ ಸಾನಿಧ್ಯಗಳಲ್ಲಿ ಹಾಗೂ ಮೂಲಸ್ಥಾನ ಗರಡಿ ಬೈಲ್ ಶ್ರೀ ಉಳ್ಳಾಕ್ಳು,ಶ್ರೀ ಕಾಚು ಕುಜುಂಬ ಸನ್ನಿಧಿಗಳಲ್ಲಿ ತಂಬಿಲ ಸೇವೆ ಹಾಗೂ ಮಕರ ಸಂಕ್ರಮಣ ಪೂಜೆ ಜರುಗಲಿದೆ ಎಂದು ಡಾ.ದೇವಿ ಪ್ರಸಾದ್ ಕಾನತ್ತೂರ್ ತಿಳಿಸಿದ್ದಾರೆ.












