ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಆದಿಬೈದೆರುಗಳ ನೇಮೋತ್ಸವ ನಡೆಯಿತು.ಮಾ.12 ರಂದು ಶ್ರೀ ದೇವರಿಗೆ ರಂಗಪೂಜೆ, ಬೀದಿ ನೇಮ ನಡೆಯಿತು. ಮಾ.13 ರಂದು ಶ್ರೀ ಆದಿಬೈದೆರುಗಳ ನೇಮೋತ್ಸವ, ಅನ್ನಸಂತರ್ಪಣೆ ನಡೆಯಿತು. ಗರಡಿ ಇಳಿದು ಬಳಿಕ

ಶ್ರೀ ದೇವಳದಲ್ಲಿ ಕಾಣಿಕೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು. ರಾತ್ರಿ ಕಿನ್ನಿದಾರು ಗರಡಿ ಇಳಿಯುವುದು, ಪ್ರಸಾದ ವಿತರಣೆ ನಡೆಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ , ವ್ಯವಸ್ಥಾಪನಾ ಸಮಿತಿ ಸದಸ್ಯರು, ಗೌರವ ಸಲಹೆಗಾರರಾದ ಮಹೇಶ್ ಕುಮಾರ್ ಕರಿಕ್ಕಳ, ಸೀಮೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.