ಪಂಬೆತ್ತಾಡಿ:ಅಮೃತ ಮಹಿಳಾ ಮಂಡಲ ಪಂಬೆತ್ತಾಡಿ ಹಾಗೂ ಅಕ್ಷತಾ ಯುವತಿ ಮಂಡಲ ಪಂಬೆತ್ತಾಡಿ ಇವರ ಜಂಟಿ ಆಶ್ರಯದಲ್ಲಿ ಆಟಿ ಸಂಭ್ರಮ ಕಾರ್ಯಕ್ರಮಪಂಬೆತ್ತಾಡಿ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕರಿಕಳ ಉದ್ಘಾಟಿಸಿದರು. ಅಮೃತ ಮಹಿಳಾ ಮಂಡಲದ
ಅಧ್ಯಕ್ಷೆ ಲಲಿತಾ ಬಾಬಿಲಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಕಾನತ್ತೂರ್, ಸುಶೀಲಾ ದೇವಪ್ಪ ನಾಯಕ್, ಸುಳ್ಯ ತಾಲೂಕು ಮಹಿಳಾ ಒಕ್ಕೂಟದ ಕಾರ್ಯದರ್ಶಿ ಅನಿತಾ ಸುತ್ತುಕೋಟೆ, ಪಂಬೆತಾಡಿ ಮಹಿಳಾ ಮಂಡಲದ ಸ್ಥಾಪಕ ಅಧ್ಯಕ್ಷೆ ರತಿದೇವಿ ಜಾಕೆ,ಅಕ್ಷತಾ ಯುತಿ ಮಂಡಲದ ಅಧ್ಯಕ್ಷೆ ಧನಲಕ್ಷ್ಮಿ ಮಠ, ಶ್ವೇತ ಪಂಜದ ಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಮ್ಯಾ ದಿಲೀಪ್ ಬಾಬ್ಲುಬೆಟ್ಟು ಪ್ರಾರ್ಥಿಸಿ,ಲಲಿತ ಬಾಬ್ಲುಬೆಟ್ಟು ವಂದಿಸಿದರು. ಧನಲಕ್ಷ್ಮಿ ಮಠ, ರಂಜನಿ ಪಂಜದಬೀಡು ನಿರೂಪಿಸಿದರು.ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳು ಹಾಗೂ ಸುಮಾರು 30 ಬಗೆಯ ತಿಂಡಿ ತಿನಿಸುಗಳನ್ನು ಮಹಿಳಾಮಂಡಲ ಹಾಗೂ ಯುವತಿ ಮಂಡಲದ ಸದಸ್ಯರು ಮನೆಯಲ್ಲಿ ತಯಾರಿಸಿ ತಂದು ವಿತರಿಸಿದರು.





