ಸುಳ್ಯ: ಕವಿಯತ್ರಿ ಲೇಖಕಿ ಶ್ವೇತಾ ರಮೇಶ್ ಬೆಳ್ಳಿಪ್ಪಾಡಿಗೆ ಮೂಡಿಗೆರೆಯ ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆ ನೀಡುವ ಪಂಪ ಸಾಹಿತ್ಯ ಸಿರಿ ಪ್ರಶಸ್ತಿ ಲಭಿಸಿದೆ. ಮೂಡಿಗೆರೆ ತಾಲೂಕು ಪಂಚಾಯತ್ ಆವರಣ ದೀನ್ ದಯಾಳ್ ಸಭಾಂಗಣದಲ್ಲಿ ಜರಗಿದ ರಾಜ್ಯಮಟ್ಟದ ಕವಿಗೋಷ್ಠಿ –
ಕವಿ ಕಾವ್ಯ ಸಮ್ಮೇಳನದಲ್ಲಿ ಶ್ವೇತಾ ರಮೇಶ್ ಬೆಳ್ಳಿಪಾಡಿ ಇವರಿಗೆ ವೇದಿಕೆಯ ರಾಜ್ಯಾಧ್ಯಕ್ಷ ಎಂ.ಎಸ್ ನಾಗರಾಜ್ ಹಾಗೂ ಗಣ್ಯರ ಸಮ್ಮುಖದಲ್ಲಿ ಪಂಪ ಸಾಹಿತ್ಯ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.