ಸುಳ್ಯ:ಅಂತಾರಾಷ್ಟ್ರೀಯ ಮಟ್ಟದ ವಾಣಿಜ್ಯ ಮೇಳ 2026ರ ಪೂರ್ವಭಾವಿಯಾಗಿ ರಾಜ್ಯಾದ್ಯoತ ವ್ಯಾಪಕವಾಗಿ ಸಿರಿಧಾನ್ಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಮರೆತು ಹೋದ ಪಾಕ ಸ್ಪರ್ಧೆಯಲ್ಲಿ ಶಶ್ಮಿ ಭಟ್ ಅಜ್ಜಾವರ ಪ್ರಥಮ ಸ್ಥಾನ ಪಡೆದರು. ಮಂಗಳೂರಿನ
ಜಂಟಿ ಕೃಷಿ ನಿರ್ದೇಶಕರ ಕಛೇರಿಯ ಆವರಣದಲ್ಲಿ ನಡೆದ ಮರೆತು ಹೋದ ಪಾಕ ಸ್ಪರ್ಧೆಯಲ್ಲಿ ಶಶ್ಮಿ ಭಟ್ ಪಾಲಿಶ್ ಮಾಡದ ಕೆಂಪಕ್ಕಿ ಅನ್ನ ಮತ್ತು ಬಾಣoತಿ ಗೊಜ್ಜು ತಯಾರಿಸಿದ್ದರು. ಶಶ್ಮಿ ಭಟ್ ಕಳೆದ ವರ್ಷ ಕೂಡ ಜಿಲ್ಲಾ ಮಟ್ಟದ ಸಿರಿಧಾನ್ಯ ಸಿಹಿ ಖಾದ್ಯ ಪಾಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಬೆಂಗಳೂರುನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು












