ಮೆಲ್ಬರ್ನ್: ಟಿ20 ಕ್ರಿಕೆಟ್ನ ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಇಂದು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಫೈನಲ್ನಲ್ಲಿ ಮುಖಾ ಮುಖಿಯಾಗಲಿದೆ.ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಮೆಲ್ಬರ್ನ್ನಲ್ಲಿ ಭಾನುವಾರ ಹಾಗೂ ಫೈನಲ್ ಪಂದ್ಯದ ಮೀಸಲು ದಿನವಾದ ಸೋಮವಾರ ಮಳೆಯಾಗುವ
ಸಾಧ್ಯತೆಯಿದೆ. ಎರಡೂ ದಿನಗಳಲ್ಲಿ ಆಟ ನಡೆಯದಿದ್ದರೆ, ಉಭಯ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.
ಇಂದಿನ ಹಣಾಹಣಿ 30 ವರ್ಷಗಳ ಹಿಂದೆ ಇದೇ ತಾಣದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಪುನರಾವರ್ತನೆ ಎನಿಸಿಕೊಂಡಿದೆ.1992ರಲ್ಲಿ ನಡೆದಿದ್ದ ಫೈನಲ್ನಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ, ಗ್ರಹಾಂ ಗೂಚ್ ನಾಯಕತ್ವದ ಇಂಗ್ಲೆಂಡ್ ಮಣಿಸಿ ಕಿರೀಟ ಮುಡಿಗೇರಿಸಿಕೊಂಡಿತ್ತು.ಪಾಕಿಸ್ತಾನ ತಂಡ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಏಳು ವಿಕೆಟ್ಗಳಿಂದ ಮಣಿಸಿದ್ದರೆ, ಇಂಗ್ಲೆಂಡ್ ತಂಡ ಭಾರತದ ವಿರುದ್ಧ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತ್ತು.
ಏಕದಿನ ವಿಶ್ವಕಪ್ ಚಾಂಪಿಯನ್ ಆಗಿರುವ ಇಂಗ್ಲೆಂಡ್ಗೆ ಇದೀಗ ಟಿ20 ವಿಶ್ವಕಪ್ ಕೂಡಾ ಗೆಲ್ಲುವ ಅವಕಾಶ ಲಭಿಸಿದೆ.
ಫೈನಲ್ನಲ್ಲಿ ಪಂದ್ಯದಲ್ಲಿ ಉಭಯ ತಂಡಗಳು ಆರಂಭಿಕ ಬ್ಯಾಟರ್ಗಳಿಂದ ಉತ್ತಮ ಜತೆಯಾಟ ನಿರೀಕ್ಷಿಸುತ್ತಿದೆ. ಆರಂಭದಲ್ಲೇ ವಿಕೆಟ್ ಪಡೆಯಬೇಕೆಂಬ ಒತ್ತಡ ಎರಡೂ ತಂಡಗಳ ಬೌಲರ್ಗಳ ಮೇಲಿದೆ.
ಪಂದ್ಯ ಆರಂಭ: ಮಧ್ಯಾಹ್ನ 1.30
ನೇರ ಪ್ರಸಾರ: ಸ್ಟಾರ್ಸ್ಪೋರ್ಟ್ಸ್ ನೆಟ್ವರ್ಕ್, ಡಿಸ್ನಿ ಪ್ಲಸ್ ಹಾಟ್ಸ್ಟಾರ್