ಹೈದರಾಬಾದ್: ನೆದರ್ಲೆಂಡ್ಸ್ ತಂಡದ ವಿರುದ್ಧ ಗೆದ್ದು ಪಾಕಿಸ್ತಾನ ತಂಡವು ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಇಂದು ನಡೆದ ಪಂದ್ಯದಲ್ಲಿ ಪಾಕಿಸ್ತಾನವು 81 ರನ್ಗಳಿಂದ ನೆದರ್ಲೆಂಡ್ಸ್ ತಂಡವನ್ನು ಸೋಲಿಸಿತು.ಟಾಸ್ ಗೆದ್ದ ನೆದರ್ಲೆಂಡ್ಸ್ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್ ಫೀಲ್ಡಿಂಗ್ ಮಾಡಲ ನಿರ್ಧರಿಸಿದರು. ಮಧ್ಯಮಕ್ರಮಾಂಕದ ಬ್ಯಾಟರ್
ಮೊಹಮ್ಮದ್ ರಿಜ್ವಾನ್ ಮತ್ತು ಸಾದ್ ಶಕೀಲ್ ತಲಾ 68 ರನ್ ಗಳಿಸಿದರು. ಅಲ್ಲದೇ ಶತಕದ ಜೊತೆಯಾಟ ಕೂಡ ಆಡಿದರು. ಇದರಿಂದಾಗಿ ತಂಡವು 49 ಓವರ್ಗಳಲ್ಲಿ 286 ರನ್ ಗಳಿಸಿತು.ಇದಕ್ಕುತ್ತರವಾಗಿ ನೆದರ್ಲೆಂಡ್ಸ್ ತಂಡವು 41 ಓವರ್ಗಳಲ್ಲಿ 205 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ತಂಡದ ಆರಂಭಿಕ ಬ್ಯಾಟರ್ ವಿಕ್ರಮಜೀತ್ ಸಿಂಗ್ (52; 67ಎ, 4X4, 6X1) ಮತ್ತು ಬಾಸ್ ಡಿ ಲೀಡ್ (67; 68ಎ, 4X6, 6X2) ಅರ್ಧಶತಕ ಗಳಿಸಿದರು. ಪಾಕ್ ತಂಡದ ವೇಗಿ ಹ್ಯಾರಿಸ್ ರವೂಫ್ (43ಕ್ಕೆ3) ಮತ್ತು ಹಸನ್ ಅಲಿ (33ಕ್ಕೆ2) ನೆದರ್ಲೆಂಡ್ಸ್ಗೆ ಕಡಿವಾಣ ಹಾಕಿದರು. ಶಾಹೀನ್ ಶಾ ಆಫ್ರಿದಿ, ಇಫ್ತಿಕಾರ್ ಅಹಮದ್, ಮೊಹಮ್ಮದ್ ನವಾಜ್ ಮತ್ತು ಶಾದಾಬ್ ಖಾನ್ ಅವರೂ ತಲಾ ಒಂದು ವಿಕೆಟ್ ಗಳಿಸಿದರು.