ಬೆಳ್ತಂಗಡಿ: ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರು ಶನಿವಾರ ಸಿರೋ ಮಲಬಾರ್ ಬಿಷಪ್ ಹೌಸ್ ಗೆ ಭೇಟಿ ನೀಡಿ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಮಾಜಿ ಸಚಿವರಾದ
ರಮಾನಾಥ್ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಗ್ರಾಮೀಣ ಘಟಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯ ಧರಣೇಂದ್ರ ಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ, ಭೂ ನ್ಯಾಯಮಂಡಳಿ ಸದಸ್ಯ ಇಸ್ಮಾಯಿಲ್ ಕೆ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಹಾಗು ಚಿಂತಕ ಲಕ್ಷ್ಮೀಶ ಕಬಲಡ್ಕ, ಶ್ರೀಧರ ಕಳೆಂಜ, ಯುವ ಕಾಂಗ್ರೆಸ್ ಗ್ರಾಮೀಣ ಘಟಕ ಅಧ್ಯಕ್ಷ ಜೈಸನ್ ಪಟ್ಟೆರಿಲ್, ಪ್ರಮುಖರಾದ ಹನೀಫ್, ಈಶ್ವರ್ ಭಟ್ ಮಾಯಿಲತ್ತೋಡಿ, ಉಜಿರೆ ಸಬಾಸ್ಟಿಯನ್ ಪಿಟಿ, ಅನಿಲ್ ಜಾಕೋಬ್, ರಾಯ್ ಪುದುವೆಟ್ಟು, ಪದ್ಮನಾಭ ಸಾಲಿಯಾನ್ ಹಾಜರಿದ್ದರು.
ಕೆ ಎಸ್ ಎಮ್ ಸಿ ಎ ಅಧ್ಯಕ್ಷ ವಿಟ್ಟಿ ಬಿ. ನೆಡುನೆಲಂ ಸ್ವಾಗತಿಸಿದರು.