ಸುರತ್ಕಲ್: ರಾಜಕೀಯವಾಗಿ ಸಿಕ್ಕ ಅವಕಾಶವನ್ನು ಸಾಮಾಜಿಕ ಶ್ರೇಯೋಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಹೇಳಿದರು. ಪಣಂಬೂರು ಸುಂದರಿ ಲಕ್ಷ್ಮಣ್ ಬಂಗೇರ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ರಾಜಕೀಯದ ಕನಸು ಕಂಡವನು ನಾನಲ್ಲ. ಆದರೆ ಎಲ್ಲರ ಒತ್ತಾಸೆಯ
ಮೇರೆಗೆ ರಾಜಕೀಯಕ್ಕೆ ಬರುವಂತಾಯಿತು. ನಾರಾಯಣಗುರುಗಳ ಆದರ್ಶವನ್ನೇ ಮೂಲವಾಗಿಟ್ಟುಕೊಂಡು ಸಾಮಾಜಿಕ ಕಾರ್ಯಗಳಿಗೆ ಮುಂದಾದೆ. ಇಂದು ರಾಜಕೀಯದ ಅವಕಾಶವೂ ಸಿಕ್ಕಿತು. ಈ ಅವಕಾಶವನ್ನು ಸಮಾಜದ, ಹಿಂದುಳಿದ ವರ್ಗದ, ಆರ್ಥಿಕ ಹಿಂದುಳಿದವರ ಶ್ರೇಯೋಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದರು. ಕೆಪಿಸಿಸಿ ಸದಸ್ಯ ಇನಾಯತ್ ಅಲಿ, ಪಣಂಬೂರು ಮೊಗವೀರ ಮಹಾಸಭಾ ಅಧ್ಯಕ್ಷ ಮಾಧವ ಸುವರ್ಣ, ಗುರಿಕ್ಕಾರ ಅಮರನಾಥ ಸುವರ್ಣ ಪುರುಷೋತ್ತಮ ಚಿತ್ರಾಪುರ, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಗಿರೀಶ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.