ಮಂಗಳೂರು:ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರಿನ ವಿವಿಧೆಡೆ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು. ಉರ್ವ ಬೋಳೂರು ಶ್ರೀ ಕೊರಗಜ್ಜ ಕ್ಷೇತ್ರದಿಂದ ಆರಂಭವಾದ ರೋಡ್ ಶೋ, ಉರ್ವಸ್ಟೋರ್, ಬೋಳೂರು, ಉರ್ವ ಗ್ರೌಂಡ್, ಅಶೋಕ ನಗರ, ಬಿಜೈ ಕಾಪಿಕಾಡ್, ಬೋಳೂರು, ಕುದ್ರೋಳಿ ಬಳಿ ರೋಡ್ ಶೋ ನಡೆಸಿ
ಪ್ರಚಾರ ಕಾರ್ಯ ನಡೆಸಿದರು. ಅಂಗಡಿ, ಮಳಿಗೆ, ಮನೆಗಳಿಗೆ ತೆರಳಿ ಮತಯಾಚನೆ ನಡೆಸಿದರು.ಈ ಸಂದರ್ಭ ಉರ್ವ ಬೋಳೂರು ಶ್ರೀ ಕೊರಗಜ್ಜ ಕ್ಷೇತ್ರ, ಈರಿ ಆದಿ ಶ್ರೀ ಕೋರ್ದಬ್ಬು ದೈವಸ್ಥಾನ, ಬೋಳೂರು ಶ್ರೀ ಜಾರಂದಾಯ ದೈವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಲಾಯಿತು.
ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕ ಐವನ್ ಡಿಸೋಜಾ, ಸಂತೋಷ್, ವಿಶ್ವಾಸ್ ದಾಸ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಮಾಜಿ ಮೇಯರ್ ಅಶ್ರಫ್, ಸಿಟಿ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಸುನಿಲ್ ಬಜಿಲಕೆರೆ, ರಾಕೇಶ್ ದೇವಾಡಿಗ, ಪದ್ಮನಾಭ ಅಮೀನ್, ಶಶಿಧರ್ ಹೆಗ್ಡೆ, ಮಹಮ್ಮದ್ ಮೋನು, ಸಂತೋಷ್ ಕುಮಾರ್ ಶೆಟ್ಟಿ ಶಾಂತಲಾ ಗಟ್ಟಿ, ವಾರ್ಡ್ ಅಧ್ಯಕ್ಷ ಗಣೇಶ್ ಟಿ.ಸಿ., ಜಾರಂದಾಯ ದೈವಸ್ಥಾನ ಅಧ್ಯಕ್ಚ ಶ್ರೀಧರ್, ಕಮಲಾಕ್ಷ ಸಾಲ್ಯಾನ್, ಪೃಥ್ವಿ, ಸುನಿಲ್ ಪೂಜಾರಿ, ರಾಜೇಂದ್ರ ಚಿಲಿಂಬಿ, ಮೂಡಾ ಮಾಜಿ ಅಧ್ಯಕ್ಷ ಬಿ.ಜಿ. ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.