ನವದೆಹಲಿ: ಗಣರಾಜೋತ್ಸವದ ಮುನ್ನದಿನವಾದ ಭಾನುವಾರ ಕೇಂದ್ರ ಗೃಹ ಸಚಿವಾಲಯವು ಈ ಸಾಲಿನ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದೆ.5 ಸಾಧಕರಿಗೆ ‘ಪದ್ಮವಿಭೂಷಣ’, 13 ಸಾಧಕರು ‘ಪದ್ಮಭೂಷಣ’ ಮತ್ತು 113 ಮಂದಿ ತಮ್ಮ ಕ್ಷೇತ್ರಗಳಲ್ಲಿನ ಗಣನೀಯ ಸಾಧನೆಗಾಗಿ ‘ಪದ್ಮಶ್ರಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಖ್ಯಾತ ಚಲನಚಿತ್ರ ನಟ
ಮಮ್ಮುಟ್ಟಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ.
ಭಾರತ ಪುರುಷರ ಕ್ರಿಕೆಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಹಾಗೂ ಮಹಿಳೆಯರ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಅವರು ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ
ಶತಾವಧಾನಿ ಆರ್. ಗಣೇಶ್ ಅವರು ‘ಪದ್ಮಭೂಷಣ’ ಗೌರವಕ್ಕೆ ಪಾತ್ರರಾಗಿದ್ದಾರೆ.ಕರ್ನಾಟಕದ ಎಂ. ಅಂಕೇಗೌಡ, ಸುರೇಶ್ ಹನಗವಾಡಿ, ಎಸ್. ಜಿ. ಸುಶೀಲಮ್ಮ ಸೇರಿದಂತೆ ವಿವಿಧ ಕ್ಷೇತ್ರಗಳ 113 ಮಂದಿ ಸಾಧಕರಿಗೆ ‘ಪದ್ಮಶ್ರಿ’ ಗೌರವ ಲಭಿಸಿದೆ.
ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ಮಾಜಿ ಟೆನಿಸ್ ಆಟಗಾರ ವಿಜಯ್ ಅಮೃತ್ರಾಜ್ ಅವರಿಗೆ ಪದ್ಮ ಭೂಷಣ ನೀಡಲಾಗಿದೆ.
ಕ್ರೀಡಾಪಟುಗಳಾದ ಬಲದೇವ್ ಸಿಂಗ್ , ಭಗವಾನ್ದಾಸ್ ರಾಯ್ಕ್ವಾರ್, ಕೆ ಪಜನಿವೆಲ್, ಪ್ರವೀಣ್ ಕುಮಾರ್, ಸವಿತಾ ಪುನಿಯಾ, ವ್ಲಾಡಿಮಿರ್ ಮೆಸ್ಟ್ವಿರಿಶ್ವಿಲಿ ಅವರಿಗೆ ಪದ್ಮ ಶ್ರೀ ಗೌರವ ಲಭಿಸಿದೆ. ಕೇರಳದ ಮಾಜಿ ಸಿಎಂ ದಿವಂಗತ ವಿ.ಎಸ್.ಅಚ್ಯುತಾನಂದನ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ.












