ತಿರುವನಂತಪುರಂ:ಓಣಂ ಬಂಪರ್ ಲಾಟರಿಯ ಪ್ರಥಮ ಬಹುಮಾನ 25 ಕೋಟಿಯ ಬಹುಮಾನ ಬಂದಿರುವ ಟಿಕೆಟ್ ಮಾರಾಟ ಮಾಡಿರುವುದು ಪಾಲಕ್ಕಾಡ್ ಜಿಲ್ಲೆಯ ವಾಳಯಾರ್ನಲ್ಲಿ ಎಂದು ವರದಿಯಾಗಿದೆ. ಮೊದಲ ಬಹುಮಾನ 25 ಕೋಟಿ TE230662 ಎಂಬ ಸಂಖ್ಯೆಯ ಟಿಕೆಟ್ಗೆ
ಒಲಿದು ಬಂದಿದೆ. ಕ್ಯಾಲಿಕಟ್ನ ಬಾವಾ ಲಾಟರಿ ಏಜೆನ್ಸಿ ಸಬ್ ಏಜೆಂಟ್ ಮೂಲಕ ಪಾಲಕ್ಕಾಡ್ ಜಿಲ್ಲೆಯ ವಾಳಯಾರ್ನಲ್ಲಿ ಮಾರಾಟ ಮಾಡಿದ ಟಿಕೆಟ್ಗೆ ಪ್ರಥಮ ಬಹುಮಾನ ಬಂದಿದೆ ಎಂದು ವರದಿಯಾಗಿದೆ. ಈ ಬಾರಿ ದಾಖಲೆಯ ಮಾರಾಟ ನಡೆದಿದ್ದ ಕೇರಳ ಸರಕಾರದ ಓಣಂ ಬಂಪರ್ ಲಾಟರಿಯ ಡ್ರಾ ಇಂದು ನಡೆಯಿತು.
ಈ ಬಾರಿ ದಾಖಲೆಯ 75.76 ಲಕ್ಷ ಟಿಕೆಟ್ ಮಾರಾಟ ಆಗಿತ್ತು. ಎರಡನೇ ಬಹುಮಾನ ತಲಾ ಒಂದು ಕೋಟಿ 20 ಮಂದಿಗೆ ಮೂರನೇ ಬಹುಮಾನ ತಲಾ 50 ಲಕ್ಷದಂತೆ 20 ಮಂದಿಗೆ ದೊರೆಯಲಿದೆ.









