ಸುಳ್ಯ:ಸುಳ್ಯ ಭಾರತೀಯ ತೀಯ ಸಮಾಜ ವಲಯ ಸಮಿತಿ,ನಗರ ಸಮಿತಿ ಹಾಗೂ ವಿವಿಧ ಗ್ರಾಮ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಓಣಂ ಆಚರಣೆ ಕೇರ್ಪಳದ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಿತು.ಕೆಯ್ಯೂರು ಗ್ರಾಮ ಪಂಚಾಯತ್ ಪಿಡಿಒ ನಮಿತಾ ಓಣಂ ಆಚರಣೆಯ ಉದ್ಘಾಟನೆ ನೆರವೇರಿಸಿದರು.ಸುಳ್ಯ ನಗರ ಸಮಿತಿಯ
ಅಧ್ಯಕ್ಷ ಸುರೇಶ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿದ್ದರು.ಅರಣ್ಯ ಇಲಾಖೆಯ ಅಧಿಕಾರಿ ಡಿ. ಬಾಲಕೃಷ್ಣ ಅರಂಬೂರು, ಕಾರ್ಯದರ್ಶಿ ರಾಜೇಶ್ ಎಸ್. ಎನ್ ಕುತ್ತಮೊಟ್ಟೆ, ಕೋಶಾಧಿಕಾರಿ ಸುನಿಲ್ ಕುಮಾರ್ ಕೆ. ಸಿ ಪರಿವಾರಕಾನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಶೋಧ ಮಧುಸೂದನ್ ಪ್ರಾರ್ಥಿಸಿದರು. ರಾಜೇಶ್ ಕುತ್ತಮೊಟ್ಟೆ ಸ್ವಾಗತಿಸಿ, ಸ್ವಪ್ನ ಪವಿತ್ರನ್ ಗುಂಡ್ಯ ವಂದಿಸಿದರು.ನವೀನ್ ಬಾಂಜಿಕೋಡಿ ಮತ್ತು ಅನನ್ಯ, ದೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.ಬಳಿಕ ಪುರುಷರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧೆಗಳು, ಪೂಕಳಂ ರಚನೆ, ಓಣಂ ಸದ್ಯ,ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.












