ಸುಳ್ಯ: ಸುಳ್ಯ ಭಾರತೀಯ ತೀಯ ಸಮಾಜ ವಲಯ ಸಮಿತಿ ನೇತೃತ್ವದಲ್ಲಿ ನಗರ ಸಮಿತಿ ಹಾಗೂ ಗ್ರಾಮ ಸಮಿತಿಯ ಸಹಕಾರದಲ್ಲಿ ಓಣಂ ಆಚರಣೆಯು ಸುಳ್ಯ ಅಂಬಟೆಡ್ಕ ಗಿರಿದರ್ಶಿನಿ ಸಭಾಭವನದಲ್ಲಿ ನಡೆಯಿತು. ವಲಯ ಸಮಿತಿ ಅಧ್ಯಕ್ಷ ಪವಿತ್ರನ್ ಗುಂಡ್ಯ ಓಣಂ ಆಚರಣೆಯ ಉದ್ಘಾಟನಾ ಸಮಾರಂಭದ
ಅಧ್ಯಕ್ಷತೆ ವಹಿಸಿದ್ದರು..ಹಿರಿಯರಾದ ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ ಕುಂಞಿಕಣ್ಣನ್ ಕಲ್ಲುಮುಟ್ಲು ಹಾಗೂ ಸುಂದರಿ ಚಂದ್ರನ್ ಪರಿವಾರಕಾನ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ನಿವೃತ್ತ ಸೈನಿಕ ಚಂದ್ರಹಾಸ ಕುತ್ತಮೊಟ್ಟೆ, ಸಮಿತಿ ಕಾರ್ಯದರ್ಶಿ ರಾಜೇಶ್ ಕುತ್ತಮೊಟ್ಟೆ, ಖಜಾಂಜಿ , ಸುನಿಲ್ ಕುಮಾರ್ ಪರಿವಾರಕಾನ ಉಪಸ್ಥಿತರಿದ್ದರು. ಸ್ವಪ್ನಾ ಪವಿತ್ರನ್ ಪ್ರಾರ್ಥಿಸಿದರು. ಶಿಕ್ಷಕಿ ವಿಜಯಲಕ್ಷ್ಮಿ ಸ್ವಾಗತಿಸಿದರು. ನಿವೃತ್ತ ಎ.ಎಸ್.ಐ ಭಾಸ್ಕರ ಅಡ್ಕಾರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ
ಸಮಾಜ ಬಾಂಧವರಿಗಾಗಿ ಪೂಕಳಂ ಸ್ಪರ್ಧೆ, ಹಗ್ಗ ಜಗ್ಗಾಟ, ಮಡಿಕೆ ಒಡೆಯುವ ಸ್ಪರ್ಧೆ ಸೇರಿ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಪುರುಷರಿಗೆ ವಿವಿಧ ಸ್ಪರ್ಧೆ ಗಳನ್ನು ಏರ್ಪಡಿಸಲಾಯಿತು.