ಸುಳ್ಯ: ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2004 – 05 ನೇ ಸಾಲಿನಲ್ಲಿ ಪಿಯುಸಿ ಕಲಿಯುತ್ತಿದ್ದ ವಿದ್ಯಾರ್ಥಿಗಳು 17 ವರ್ಷಗಳ ಬಳಿಕ ಅದೇ ಕಾಲೇಜಿನಲ್ಲಿ ಒಟ್ಟು ಸೇರಿ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 17 ವರ್ಷಗಳ ಹಿಂದೆ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದವರನ್ನು ಗೌರವಿಸಿ, ಕಾಲೇಜಿಗೆ ದೇಣಿಗೆ ಹಸ್ತಾಂತರ ಮಾಡಲಾಯಿತು.ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ
ಪ್ರಾಂಶುಪಾಲ ಮೋಹನ್ ಗೌಡ ಬೊಮ್ಮೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲೆ ಡಾ.ರೇವತಿ ನಂದನ್ ಉದ್ಘಾಟಿಸಿದರು. 2004-05 ರಲ್ಲಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ, ಅಣ್ಣಪ್ಪ ಸ್ವಾಮಿ, ಕಾವೇರಿ, ನಮಿತಾ, ಶಾರದಾ, ಭುವನೇಶ್ವರಿ, ಹಸೀನಾಭಾನು, ಜಾನಕಿ ಗೋಪಾಲಕೃಷ್ಣ ಬನ,
ದೈಹಿಕ ಶಿಕ್ಷಣ ಶಿಕ್ಷಕ ನಟರಾಜ್ ಎಂ.ಎಸ್ ಅವರನ್ನು ಗೌರವಿಸಲಾಯಿತು. ಸುಮಾರು 50 ಮಂದಿ ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ಹಿಂದಿನ ನೆನಪುಗಳನ್ನು ಮೆಲುಕು ಹಾಕಿದರು. 2004-05ನೇ ಸಾಲಿನ ವಿದ್ಯಾರ್ಥಿಗಳು ಕಾಲೇಜಿಗೆ ತಮ್ಮ ಹೆಸರಿನಲ್ಲಿ ರೂ.40 ಸಾವಿರ ದೇಣಿಗೆಯನ್ನು ಕಾಲೇಜಿನ ಪ್ರಾಂಶುಪಾಲ ಮೋಹನ್ ಗೌಡ ಬೊಮ್ಮೆಟ್ಟಿಯವರಿಗೆ ಹಸ್ತಾಂತರಿಸಿದರು.

ಪ್ರತಿಮಾ ಪ್ರಾರ್ಥಿಸಿದರು. ಉದ್ಯಮಿ ಸತ್ತಾರ್ ಪೈಚಾರ್ ಸ್ವಾಗತಿಸಿ, ಪತ್ರಕರ್ತ ಶಿವಪ್ರಸಾದ್ ಕೇರ್ಪಳ ಪ್ರಾಸ್ತಾವಿಕ ಮಾತನಾಡಿದರು. ಯುವಜನ ಸಂಯುಕ್ತ ಮಂಡಳಿ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಹಾಗೂ ಉಪನ್ಯಾಸಕಿ ನವ್ಯಾ ಅನಿಸಿಕೆ ವ್ಯಕ್ತ ಪಡಿಸಿದರು. ಶಿಕ್ಷಕಿ ಅಕ್ಷತಾ ಕುಡ್ನಕಜೆ ಹಾಗೂ ಕ.ಸಾ.ಪ. ನಿರ್ದೇಶಕಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು. ತಾ.ಪಂ. ಉದ್ಯೋಗಿ ಸಂತೋಷ್ ಕ್ರಾಸ್ತ ದುಗಲಡ್ಕ ಉಪನ್ಯಾಸಕರನ್ನು ಪರಿಚಯಿಸಿದರು. ಕಾರ್ಯಕ್ರಮ ಸಂಘಟಕಿ ಸುನಿತಾ ಮಚಾದೋ ವಂದಿಸಿದರು. ಕಾಲೇಜಿನ ಸಮಾಜ ಶಾಸ್ತ ಉಪನ್ಯಾಸಕ ಶಿವರಾಮ ನಾಯ್ಕ್, ಪತ್ರಕರ್ತ ಕುಶಾಂತ್ ಕೊರತ್ಯಡ್ಕ 2004-05ನೇ ಸಾಲಿನ ವಿದ್ಯಾರ್ಥಿ ಪತ್ರಕರ್ತ ಕುಶಾಂತ್ ಕೊರತ್ಯಡ್ಕ ಹಾಗು ಇತರರು ಹಾಗೂ ಪ್ರಸ್ತುತ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಸಹಕಾರ ನೀಡಿದರು.