ಸುಳ್ಯ: ಸುಳ್ಯ ನಗರದ ಓಡಬಾಯಿ ಭಾಗದಿಂದ ಅಜ್ಜಾವರ ಗ್ರಾಮದ ದೊಡ್ಡೇರಿ ಭಾಗವನ್ನು ಸಂಪರ್ಕಿಸಲು ಪಯಸ್ವಿನಿ ನದಿಗೆ ನಿರ್ಮಾಣಗೊಂಡಿರುವ ತೂಗುಸೇತುವೆ ಶಿಥಿಲಗೊಂಡ ಹಿನ್ನಲೆಯಲ್ಲಿ ದುರಸ್ತಿ ಕಾರ್ಯ ಆರಂಭಗೊಂಡಿದ್ದು ಶಾಸಕಿ ಭಾಗೀರಥಿ ಮುರುಳ್ಯ ಕೆಲಸ ವೀಕ್ಷಿಸಿ ಮಾಹಿತಿ ಪಡೆದರು.ಶಾಸಕಿ ತೂಗುಸೇತುವೆಯಲ್ಲಿ
ನಿರ್ವಹಿಸಲಾಗುತ್ತಿರುವ ಕೆಲಸವನ್ನು ವೀಕ್ಷಿಸಿ ಕಾರ್ಮಿಕರು, ಗುತ್ತಿಗೆದಾರರಿಂದ ಮಾಹಿತಿ ಪಡೆದರು. ಈಗಾಗಲೇ ಹಳೆಯ ಸೈಡ್ ನೆಟ್ ತೆರವು ಮಾಡಿ ಹೊಸ ಸೈಸ್ನೆಟ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ವೇಳೆ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯ ಓಡಬಾಯಿ ತೂಗುಸೇತುವೆಯ ದುರಸ್ತಿಗೆ ಮಂಜೂರುಗೊಂಡಿರುವ ರೂ.10 ಲಕ್ಷದಲ್ಲಿ ದುರಸ್ತಿ ಕಾರ್ಯ ಆರಂಭಗೊಂಡಿದೆ. ತುಕ್ಕು ಹಿಡಿದ ಉಪಕರಣ ತೆಗೆದು ಹೊಸತು ಅಳವಡಿಸಲಾಗುವುದು, ಬಳಿಕ ಪೈಂಟ್ ಹಾಕಲಾಗುತ್ತದೆ. ಈಗ ಇರುವ ಅನುದಾನದಲ್ಲಿ ಕೆಲಸ ಮಾಡಲಾಗುತ್ತಿದ್ದು ಅವಶ್ಯಕತೆ ಬಿದ್ದಲ್ಲಿ ಹೆಚ್ಚುವರಿ ಅನುದಾನ ಜೋಡಿಸಲು ಪ್ರಯತ್ನಿಸಲಾಗುವುದು. ಗುಣಮಟ್ಟದ ಕಾಮಗಾರಿ ನಿರ್ವಹಿಸಲು ಸೂಚಿಸಲಾಗಿದೆ ಎಂದರು.
ಮುಂದಿನ ಎರಡು ವರ್ಷದಲ್ಲಿ ಸರ್ವ ಋತುವಿನಲ್ಲೂ ಸಂಪರ್ಕಿಸಲು ಶಾಶ್ವತ ಸೇತುವೆ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಶಾಸಕರು ಭರವಸೆ ನೀಡಿದರು.ಪ್ರಮುಖರಾದ ಹರೀಶ್ ಕಂಜಿಪಿಲಿ, ಸುಭೋದ್ ಶೆಟ್ಟಿ ಮೇನಾಲ, ಸತ್ಯವತಿ ಬಸವನಪಾದೆ,ಸುನಿಲ್ ಕೇರ್ಪಳ, ನಿಕೇಶ್ ಉಬರಡ್ಕ, ಮಾಧವ ಚಾಂತಾಳ, ಚಂದ್ರಶೇಖರ ದೊಡ್ಡೇರಿ,ಗುತ್ತಿಗೆದಾರ ಯೋಗೀಶ್ ಪೂಜಾರಿ, ಮತ್ತು ಊರಿನ ನಾಗರಿಕರು ಉಪಸ್ಥಿತರಿದ್ದರು.












