ಸುಳ್ಯ:ಎಲಿಮಲೆಯ ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ನ
ರೂಬಿ ಜ್ಯುಬಿಲಿ ಸಮಾರಂಭವು ಫೆ 1 ಮತ್ತು 2 ರಂದು ಜರಗಲಿದ್ದು, ಅದರ ಪ್ರಯುಕ್ತ ನಡೆಯುವ ನೂತನ ಕಛೇರಿ ಉದ್ಘಾಟನೆ ,
ಸಾಮಾಜಿಕ ನಾಯಕರ ಸಮಾವೇಶ, ಧಾರ್ಮಿಕ ಉಪನ್ಯಾಸ ಹಾಗೂ ಅರಿವಿನ್ ನಿಲಾವ್ ಆತ್ಮೀಯ ಮಜ್ಲಿಸ್ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಯು
ಸುಳ್ಯದ ಹರ್ಲಡ್ಕ ವಿಲ್ಲಾದಲ್ಲಿ ಜರುಗಿತು. ಉಡುಪಿ -ದ.ಕ ಜಿಲ್ಲಾ ಖಾಝಿ ಹಿರಿಯ ವಿಧ್ವಾಂಸರಾದ ಶೈಖುನಾ ಮಾಣಿ ಉಸ್ತಾದರು ಬಿಡುಗಡೆಗೊಳಿಸಿ ಶುಭ ಹಾರೈಸಿದರು..ಕಾರ್ಯಕ್ರಮದಲ್ಲಿ ನುಸ್ರತುಲ್ ಇಸ್ಲಾಂ ಅಸೋಸಿಯೇಷನ್ನ ಅಧ್ಯಕ್ಷ ಲತೀಫ್ ಹರ್ಲಡ್ಕ, ಪ್ರಧಾನವಕಾರ್ಯದರ್ಶಿ ಸೂಫಿ ಎಲಿಮಲೆ. ಕಾರ್ಯದರ್ಶಿ ಸಿದ್ದೀಕ್ ಎಲಿಮಲೆ, ಅನ್ಸಾರಿಯಾ ಎಜ್ಯುಕೇಶನ್ ಸೆಂಟರ್ ಮುದರ್ರಿಸ್ ಅಬೂಬಕ್ಕರ್ ಸಖಾಫಿ, ಮೊಯಿದೀನ್ ಹಾಜಿ ಫ್ಯಾನ್ಸಿ, ಹಾಗೂ ಹಿರಿಯರಾದ ಬಾಬ ಹಾಜಿ ಹರ್ಲಡ್ಕ ಉಪಸ್ಥಿತರಿದ್ದರು.










