ಸುಳ್ಯ:ಕೆ.ವಿ.ಜಿ.ಪಾಲಿಟೆಕ್ನಿಕ್ ಕಾಲೇಜಿನ ಎನ್.ಎಸ್.ಎಸ್. ಹಿರಿಯ ವಿದ್ಯಾರ್ಥಿಗಳ ಸಂಘ ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ ಸುಳ್ಯ ವತಿಯಿಂದ ಕೆ.ವಿ.ಜಿ. ಪಾಲಿಟೆಕ್ನಿಕ್ನ ನಿವೃತ್ತ ಉದ್ಯೋಗಿಗಳಿಗೆ ಸನ್ಮಾನ ಸಮಾರಂಭವು ಕಾನತ್ತಿಲ ದೆವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯಿತು. 36 ವರ್ಷ ಸೇವೆ ಸಲ್ಲಿಸಿ ಜನವರಿ 31ರಂದು ನಿವೃತ್ತಿ ಹೊಂದಿದ
ಪ್ರಾಂಶುಪಾಲರಾದ ಜಯಪ್ರಕಾಶ ಕಲ್ಲುಗದ್ದೆ ಅವರನ್ನು ಸನ್ಮಾನಿಸಲಾಯಿತು. ಹಾಗೂ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಸತ್ಯನಾರಾಯಣ ಪ್ರಸಾದ್ ಹಾಗೂ ಮೆಕಾನಿಕಲ್ ವಿಭಾಗದಲ್ಲಿ ಬೋದಕರಾಗಿ ಸೇವೆ ಸಲ್ಲಿಸಿದ ಚಂದ್ರಶೇಖರ ಎಂ.ಕೆ ಅವರನ್ನು ಸನ್ಮಾನಿಸಲಾಯಿತು
ಸಭೆಯ ಅಧ್ಯಕ್ಷತೆಯನ್ನು ಕೆ.ವಿ.ಜಿ ಪಾಲಿಟೆಕ್ನಿಕ್ನ ನಿವೃತ್ತ ಪ್ರಾಂಶುಪಾಲರಾದ ಎನ್.ಆರ್ ಗಣೇಶ್ ವಹಿಸಿದ್ದರು. ಅಥಿತಿಗಳ ಪರಿಚಯವನ್ನು ನಿವೃತ್ತ ಪ್ರಾಂಶುಪಾಲರಾದ ಬಾಲಕೃಷ್ಣ ಗೌಡ ಬೆಳ್ಳೂರು ನೆರೆವೆರಿಸಿದರು. ಹೇಮನಾಥ್ ಜಯನಗರ ಸ್ವಾಗತಿಸಿ ರಕ್ಷಿತ್ ಬೆಳ್ಳೂರು ವಂದಿಸಿದರು ಸುಜಿತ್ ಎಂ ಎಸ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಮನಮೋಹನ್ ಪುತ್ತಿಲ , ಮನಮೋಹನ್ ಅರಂಬೂರು, ಉಷಾ ಮುಳ್ಯ, ಸುನಿಲ್ ಪಾವಲಿಕಜೆ, ಚಿದಾನಂದ ಬೆಳ್ಳಿಪಾಡಿ, ಸೌಜನ್ಯ ಕುತ್ಯಾಳ ಸಂದೀಪ್ ನಾಯಕ್, ಪುನಿತ್ ಪೂಜಾರಿಗದ್ದೆ, ಪ್ರಶಾಂತ್ ಪೆರಾಲ್, ಗೌರವ್, ಪವೀನ, ಉದಯ್, ಹರ್ಷಿತ್,ಅನಿಲ್, ಕಿಶೋರ್, ಅನೀಶ್ ಅವರು ಉಪಸ್ಥಿತರಿದ್ದರು









