ಸುಳ್ಯ: ಸುಳ್ಯ ನೆಹರೂ ಸ್ಮಾರಕ ಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ (ಎನ್ಎಸ್ಎಸ್) ವಾರ್ಷಿಕ ವಿಶೇಷ ಶಿಬಿರ ಕಲ್ಲಪಳ್ಳಿ ಆದರ್ಶ ಕಲಾ ಹಾಗೂ ಕ್ರೀಡಾ ಸಂಘದಲ್ಲಿ ಆರಂಭಗೊಂಡಿದೆ. ಜೂ.19ರಿಂದ 25ರವರೆಗೆ ಶಿಬಿರ ನಡೆಯಲಿದೆ. ಆದರ್ಶ ಕಲಾ ಸಂಘದ ಸಭಾಂಗಣದಲ್ಲಿ ನಡೆದ
ಸಮಾರಂಭದಲ್ಲಿ ಎ.ಒ.ಎಲ್.ಇ ಯ ಕಾರ್ಯದರ್ಶಿ ಕೆ.ವಿ ಹೇಮನಾಥ್ ದೀಪ ಬೆಳಗಿಸಿ ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರುದ್ರಕುಮಾರ್ ಎಂ.ಎಂ. ವಹಿಸಿದ್ದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಪ್ರೊ.ಸಂಜೀವ ಕುದ್ಪಾಜೆ, ಹಿರಿಯ ವಕೀಲರಾದ ಎ.ಸಿ.ನಂದನ್ ಕಲ್ಲಪಳ್ಳಿ, ಪ್ರಗತಿಪರ
ಕೃಷಿಕ ಶ್ರೀಕಾಂತ್ ಗೋಳ್ವಲ್ಕರ್, ಎನ್ಎಸ್ಎಸ್ ಶಿಬಿರದ ಸ್ವಾಗತ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಪೆರುಮುಂಡ, ಪ್ರಮುಖರಾದ ಪಿ.ವಿ.ಬಾಲಚಂದ್ರ, ಆದರ್ಶ ಕಲಾ ಮತ್ತು ಕ್ರೀಡಾ ಸಂಘದ ಸ್ಥಾಪಕಾಧ್ಯಕ್ಷ ಬಾಲಚಂದ್ರ ಪೆರುಮುಂಡ, ಅಧ್ಯಕ್ಷ ಶ್ರೀಜಿತ್, ಆದರ್ಶ ಮಹಿಳಾ ಸಂಘದ ಅಧ್ಯಕ್ಷೆ ಮಂಜುಳಾ ಗೋಪಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಒಂದು ವಾರದ ಶಿಬಿರದಲ್ಲಿ ಕಾಲೇಜಿನ ಎನ್ಎಸ್ಎಸ್ ಸ್ವಯಂ ಸೇವಕರಾದ 98 ವಿದ್ಯಾರ್ಥಿಗಳು ಹಾಗೂ ಎನ್ಎಸ್ಎಸ್ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ.