ಸುಳ್ಯ: ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ಟ್ಯಾಲೆಂಟ್ಸ್ ಡೇ ಕಾರ್ಯಕ್ರಮ ಕೆವಿಜಿ ಆಡಿಟೋರಿಯಂ ನಲ್ಲಿ ನಡೆಯಿತು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಹರಿಣಿ ಪುತ್ತೂರಾಯ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಪ್ರತಿಭಾ ಪ್ರದರ್ಶನವನ್ನು
ನೀಡಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ರೇಷ್ಮಾ ಎಂ.ಎಂ,ಹರೀಶ ಸಿ,ಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ವಿದ್ಯಾರ್ಥಿಗಳು ಹಾಡು,ನೃತ್ಯ,ಪ್ರಹಸನ ವಿವಿಧ ವಿನೋದಾವಳಿಗಳನ್ನು ಸಾದರಪಡಿಸಿದರು.ವಿದ್ಯಾರ್ಥಿ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಅಂಬಿಕಾ ಸ್ವಾಗತಿಸಿ,ಪ್ರಥಮ ವಿಜ್ಞಾನ ವಿಭಾಗದ ಅಮೋಘ ಎಂ ಎಸ್,ಆಯಿಷತ್ ಅಸ್ನ ಕಾರ್ಯಕ್ರಮ ನಿರೂಪಿಸಿದರು.ದ್ವಿತೀಯ ವಿಜ್ಞಾನ ವಿಭಾಗದ ಸಮೃದ್ದಿ ವಂದಿಸಿದರು.ಈ ಸಂದರ್ಭದಲ್ಲಿ ಬೋಧಕ -ಬೋಧಕೇತರ ವೃಂದ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.