ಸುಳ್ಯ:ವಿದ್ಯಾರ್ಥಿಗಳು ಅರಳುವ ಹೂವುಗಳು. ನಿಮ್ಮಲ್ಲಿ ಕೌಶಲ್ಯ ಇದೆ. ನಿಮ್ಮಲ್ಲಿ ಬದುಕಿನ ಭರವಸೆಯನ್ನು ಈಡೇರಿಸಿ ಕೊಳ್ಳಲು ವ್ಯಕ್ತಿತ್ವ ಬಹಳ ಮುಖ್ಯ.ನಾವು ಇನ್ನೊಬ್ಬರನ್ನು ನೋಡಿ ಅನುಸರಿಸುತ್ತೇವೆ. ಸ್ವಂತಿಕೆಯಿಂದ ಆಲೋಚಿಸಿ ಕಾರ್ಯಮಗ್ನರಾಗಬೇಕು. ಆಗ ನಮಗೆ ಸೋಲಾಗುವುದಿಲ್ಲ. ಎಂದು ಸುಳ್ಯ ಎನ್ನೆoಸಿಯ ಕನ್ನಡ ಉಪನ್ಯಾಸಕಿ, ತರಬೇತುದಾರರಾದ ಡಾ. ಅನುರಾದ ಕುರುಂಜಿ ಹೇಳಿದರು. ಅವರು ಸುಳ್ಯದ ನೆಹರು
ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ನಡೆದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಹರಿಣಿ ಪುತ್ತೂರಾಯ ಅವರು ಮಾತನಾಡಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ನಮಗೆ ಪ್ರೇರಕ, ಮೌಲ್ಯಗಳನ್ನು
![](https://thesulliamirror.com/wp-content/uploads/2023/07/IMG_20230702_124342.jpg)
ಅಳವಡಿಸಿಕೊಂಡು ನಾವು ಬಾಳಬೇಕು. ಕಲಿಕೆ ನಿರಂತರ ಪ್ರಕ್ರಿಯೆ, ದೈನಂದಿನ ಬದುಕನ್ನು ಸಮದೂಗಿಸಿಕೊಂಡು ಗುಣ ವ್ಯಕ್ತಿತ್ವ ದಿಂದ ಬದುಕನ್ನು ಅರಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಿ ಎಂದು ಕರೆ ನೀಡಿದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ರೇಷ್ಮಾ ಎಂ ಎಂ, ಹರೀಶ ಸಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಹರೀಶ ಸಿ ಸ್ವಾಗತಿಸಿ, ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ. ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ ಎಂ ವಂದಿಸಿದರು.