ಸುಳ್ಯ:ಮಂಗಳೂರು ವಿಶ್ವವಿದ್ಯಾನಿಲಯದ 2021-22 ನೇ ಎಂ.ಎಸ್.ಡಬ್ಲ್ಯೂ (ಮಾಸ್ಟರ್ ಆಫ್ ಸೋಶಿಯಲ್ ವರ್ಕ್) ಸ್ನಾತಕೋತ್ತರ ಪರೀಕ್ಷೆಯಲ್ಲಿ ನೆಹರು ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿನಿ ಶ್ರೀನಾ.ಪಿ ಪ್ರಥಮ ರ್ಯಾಂಕ್, ಮಾಳವಿಕಾ.ಸಿ ದ್ವಿತೀಯ ರ್ಯಾಂಕ್ ಹಾಗೂ ಸ್ನಾತಕೋತ್ತರ

ವಾಣಿಜ್ಯ ಶಾಸ್ತ್ರ ವಿಭಾಗದ (ಎಂ.ಕಾಂ) ಪವಿತ್ರ.ಕೆ ಇವರು ಹತ್ತನೇ ರ್ಯಾಂಕ್ ಪಡೆದಿರುತ್ತಾರೆ.
ಶ್ರೀನಾ.ಪಿ ಇವರು ಕೇರಳದ ಕಯ್ಯೂರ್ ನಿವಾಸಿಗಳಾದ ಕುಂಞ ಕೃಷ್ಣನ್ ಹಾಗೂ ಬಿಂದು.ಕೆ.ಕೆ ಇವರ ಪುತ್ರಿ. ಮಾಳವಿಕ.ಸಿ ಇವರು ಚೆರುವತ್ತೂರು ನಿವಾಸಿಗಳಾದ ಪದ್ಮನಾಭನ್.ಸಿ. ಹಾಗೂ ವಿಮಲ.ಸಿ ದಂಪತಿಗಳ ಪುತ್ರಿ ಹಾಗೂ ಪವಿತ್ರ.ಕೆ ಚಂದ್ರಶೇಖರ್ ಗೌಡ ಹಾಗೂ ಗಿರಿಜಾ ದಂಪತಿಗಳ ಪುತ್ರಿ, ಪಿಂಡಿಮನೆ ಓಂ.ಪ್ರಸಾದ್ ಇವರ ಪತ್ನಿ.