ಸುಳ್ಯ:ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶ ಘಟಕಗಳ ವತಿಯಿಂದ ‘ಜೀವನಕ್ಕೆ ಬೆಳಕು- ಧನಾತ್ಮಕ ಮನೋ ಆರೋಗ್ಯ ತರಬೇತಿ’ ಕಾರ್ಯಕ್ರಮ ಕಾಲೇಜಿನ ದೃಶ್ಯ ಶ್ರವಣ ಕೊಠಡಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸುಳ್ಯದ ಎಸ್.ಬಿ ಲ್ಯಾಬೋರೇಟರಿ ಮಾಲಕರಾದ ಬಾಲಕೃಷ್ಣ ಎಂ ಉದ್ಘಾಟಿಸಿದರು.ಖ್ಯಾತ ಮನಶಾಸ್ತ್ರಜ್ಞ
ಪುನರ್ನವ ಟ್ರಸ್ಟ್ ಸ್ಥಾಪಕ ನವೀನ್ ಎಲ್ಲಂಗಳ ತರಬೇತುದಾರರಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ವಹಿಸಿದ್ದರು. ವೇದಿಕೆಯಲ್ಲಿ ಪುನರ್ನವ ಟ್ರಸ್ಟ್ ಸಲಹೆಗಾರ ರಂಜಿತ್ ಉಪಸ್ಥಿತರಿದ್ದರು. ನೇಚರ್ ಕ್ಲಬ್ ಸದಸ್ಯೆ ಸುಷ್ಮಿತಾ ಸ್ವಾಗತಿಸಿ, ನೇಚರ್ ಕ್ಲಬ್ ಸಂಯೋಜಕ ಕುಲದೀಪ್ ಪೆಲ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು ಚೈತ್ರ ಮತ್ತು ತಂಡದವರು ಪ್ರಾರ್ಥಿಸಿ, ಕೀರ್ತಿಕಾ ಅತಿಥಿಗಳನ್ನು ಪರಿಚಯಿಸಿ,ಶಿಲ್ಪ ವಂದಿಸಿದರು. ನೇಚರ್ ಕ್ಲಬ್ ಸದಸ್ಯೆ ಯಶಿಕ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕರಾದ ಸತ್ಯಪ್ರಕಾಶ್ ಡಿ, ಕೃತಿಕಾ ಕೆ ಜೆ, ಕೃಪಾ ಎಂ, ಶೋಭಾ ಎ, ಅಶ್ವಿನಿ ಕೆ, ರಂಜಿತಾ ಗಿರೀಶ್, ಮಮತ, ಅಜಿತ್ ಕುಮಾರ್, ಹರ್ಷಕಿರಣ, ಪಲ್ಲವಿ ಮತ್ತು ಬೋಧಕೇತರ ಸಿಬ್ಬಂದಿಗಳಾದ ಭವ್ಯ, ಜಯಂತಿ, ಗೀತಾ, ಪವನ್ ಹಾಗೂ ನೇಚರ್ ಕ್ಲಬ್ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.









