ಸುಳ್ಯ: ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಮತ್ತು ರೆಡ್ ಕ್ರಾಸ್ ಘಟಕಗಳ ವತಿಯಿಂದ ಸಂವಿಧಾನ ದಿನಾಚರಣೆಯನ್ನು ಕಾಲೇಜು ಸಭಾಂಗಣದಲ್ಲಿ ಆಚರಿಸಲಾಯಿತು.ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಭಾಗವಹಿಸಿದ
ಕಾಲೇಜಿನ ಪ್ರಾಂಶುಪಾಲರಾದ ಪ್ರೊ ರುದ್ರಕುಮಾರ್ ಎಂ. ಎಂ ಸಂವಿಧಾನ ಮಹತ್ವದ ಕುರಿತು ಮತ್ತು ನವೆಂಬರ್ 26 1949 ರಂದು ಸಂವಿಧಾನ ಅಂಗೀಕರಿಸಲಾಗಿ ಪ್ರತಿವರ್ಷ ಈ ದಿನ ಸಂವಿಧಾನ ದಿನಾಚರಣೆ ಆಚರಿಸಲಾಗುವುದು ಎಂದು ಮಾಹಿತಿ ನೀಡಿದರು.
ಘಟಕಾಧಿಕಾರಿ ಸಂಜೀವ ಕೆ. ಸಂವಿಧಾನದ ಪೀಠಿಕೆಯನ್ನು ಬೋದಿಸಿದರು. ದ್ವಿತೀಯ ಕಲಾ ವಿಭಾಗದ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಎನ್ ಎಸ್ ಎಸ್ ಘಟಕಾಧಿಕಾರಿ ಚಿತ್ರಲೇಖ ಕೆ ಎಸ್ ಮತ್ತು ಎಲ್ಲಾ ಸ್ವಯಂಸೇವಕರು ಸಹಕರಿಸಿದರು.









