ಸುಳ್ಯ:ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಸುಳ್ಯ ಇದರ ವತಿಯಿಂದ ಸುಳ್ಯದ ಶಾಸಕಿ, ಟ್ರಸ್ಟ್ ನ ಸದಸ್ಯರೂ ಆದ ಭಾಗೀರಥಿ ಮುರುಳ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಟ್ರಸ್ಟ್ ನ ಅಧ್ಯಕ್ಷೆ ಇಂದಿರಾ ರೈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು .ಕಾರ್ಯದರ್ಶಿ ಗುಣವತಿ ಕೊಲ್ಲಂತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.ನಿರ್ದೇಶಕರಾದ
ಲೋಲಾಕ್ಷಿ ದಾಸನಕಜೆ, ರಾಜೀವಿ ಐವರ್ನಾಡು, ಶಶಿಕಲಾ ದುಗ್ಗಲಡ್ಕ, ವೀಣಾ ಮೊಂಟಡ್ಕ, ಸವಿತಾ ಕಾಯಾರ, ದಿವ್ಯ ಮಡಪ್ಪಾಡಿ, ಸರಸ್ವತಿ ಕಕ್ಕಾಡು ಹಾಗೂ ಅನುಷ್ಠಾನ ಸಮಿತಿಯ ಸದಸ್ಯರು , ಗ್ರಾಮವಾರು ಸಂಚಲನಾ ಸಮಿತಿಯ ಸಂಚಾಲಕರು , ಸಹಸಂಚಾಲಕರು ಹಾಗು ಸದಸ್ಯರು ಉಪಸ್ಥಿತರಿದ್ದರು.ಗುಣವತಿ ಕೊಲ್ಲಂತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಟ್ರಸ್ಟ್ನ ಸಹ ಕೋಶಾಧಿಕಾರಿ ಶಾರದಾ ಶೆಟ್ಟಿ ಸ್ವಾಗತಿಸಿದರು. ನಿರ್ದೇಶಕರಾದ ಪುಷ್ಪಾ ಮೇದಪ್ಪ ಪ್ರಾರ್ಥಿಸಿದರು. ಕೋಶಾಧಿಕಾರಿ ಜಯಂತಿ ಅಜ್ಜಾವರ ಧನ್ಯವಾದ ಸಮರ್ಪಿಸಿದರು. ಸಹ ಕಾರ್ಯದರ್ಶಿ ಜಾಹ್ನವಿ ಕಾಂಚೋಡು ಕಾರ್ಯಕ್ರಮ ನಿರೂಪಿಸಿದರು.