ಸುಳ್ಯ: ಸುಳ್ಯ ತಾಲೂಕು ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ವತಿಯಿಂದ ಸಿ .ಎ. ಬ್ಯಾಂಕ್ ಸಭಾಭವನದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ನ ಅಧ್ಯಕ್ಷೆ ಪುಷ್ಪ ಮೇದಪ್ಪ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮವನ್ನು
ದಂಪತಿಗಳಾದ ಕಳಪಾರೆ ಪೈಲಾರು ಚೈತ್ರ ಲೋಕೇಶ್ ಪೂಜಾರಿ ಉದ್ಘಾಟಿಸಿದರು. ಸಾಂದೀಪ ವಿಶೇಷ ಶಾಲೆಯ ಮುಖ್ಯೋಪಾಧ್ಯಾಯಿನಿ ಹರಿಣಿ ಸದಾಶಿವ ಮಹಿಳಾ ದಿನಾಚರಣೆಯ ಬಗ್ಗೆ ಮಾಹಿತಿ ನೀಡಿದರು. ನಾಟಿ ವೈದ್ಯ ಮತ್ತು ಶೋಭಾನೆ ಹಾಡುಗಾರರಾದ ಸತ್ಯವತಿ ಅಡ್ಪಂಗಾಯ ಇವರನ್ನು ಸನ್ಮಾನಿಸಲಾಯಿತು. ಸತ್ಯವತಿಯವರ ಪರಿಚಯವನ್ನು ಜಯಂತಿ ವಾಚಿಸಿದರು. ಸ್ತ್ರೀ ಆರೋಗ್ಯ ತಜ್ಞೆ ಡಾ.ವೀಣಾ ಆರೋಗ್ಯ ಮಾಹಿತಿ ನೀಡಿದರು. ನುರಿತ ತರಬೇತುದಾರರಿಂದ ಗವ್ಯ ಉತ್ಪನ್ನಗಳಿಂದ ತಯಾರಿಸಲಾಗುವ ಧೂಪ, ದೀಪ, ದಂತಮಜ್ಜನ,ಗೋ ರಕ್ಷಾ ಕವಚ ಗಳ ಬಗ್ಗೆ ಗೋ ಸೇವಾ ಪ್ರಮುಖ್ ಅಕ್ಷಯ್ ಮಾಹಿತಿಯನ್ನು ನೀಡಿದರು.
ಮಹಿಳಾ ದಿನಾಚರಣೆಯ ಪ್ರಯುಕ್ತ ಈ ವರ್ಷದ ಅದೃಷ್ಟ ಗೃಹಿಣಿ ಮಹಿಳೆಯನ್ನು ಆಯ್ಕೆ ಮಾಡಲಾಯಿತು. ಟ್ರಸ್ಟ ನ ಎಲ್ಲಾ ಆಡಳಿತ ಮಂಡಳಿಯ ಸದಸ್ಯರು ಅನುಷ್ಠಾನ ಸಮಿತಿ ಸದಸ್ಯರು ಗ್ರಾಮ ಸಂಚಾಲನ ಸಮಿತಿ ಸದಸ್ಯ ರು ಉಪಸ್ಥಿತರಿದ್ದರು.ಆರೋಗ್ಯ ಭಾರತಿ ರಾಜ್ಯ ಕಾರ್ಯದರ್ಶಿ ರಾಘವೇಂದ್ರ ಜೀ, ಜಿಲ್ಲಾ ಪ್ರಮುಖ್ ಪುರುಷೋತ್ತಮ ದೇವಸ್ಯಉಪಸ್ಥಿತರಿದ್ದರು. ಗುಣವತಿ ಕೊಲ್ಲಂತಡ್ಕ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ವಕೀಲೆ ಸುಮನ ವಂದೆಮಾತರಂ ಗೀತೆ ಹಾಡಿದರು. ಶಶಿಕಲಾ ಎ ಕಾರ್ಯಕ್ರಮ ನಿರೂಪಿಸಿ ಶಾರದಾ ಡಿ ಶೆಟ್ಟಿ ವಂದಿಸಿ ದರು.










