ಸುಳ್ಯ:ಮಹಿಳೆಯರಿಗೆ ಲೋಕಸಭೆ ಮತ್ತು ವಿಧಾನಸೌಡಯಲ್ಲಿ ಶೇಖಡಾ 33 ಮೀಸಲಾತಿ ನೀಡುವ ಮಹಿಳಾ’ನಾರಿ ಶಕ್ತಿ ವಂದನಾ ಮಸೂದೆಯನ್ನು’ ಕೇಂದ್ರ ಸರಕಾರ ಜಾರಿ ಮಾಡಿರುವುದು ಸ್ವಾಗತಾರ್ಹ. ಮಸೂದೆ ಜಾರಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರಕಾರವನ್ನು ಅಭಿನಂದಿಸುವುದಾಗಿ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ನ ಪದಾಧಿಕಾರಿಗಳು ಹೇಳಿದ್ದಾರೆ. ಸದ್ದಿಗೋಷ್ಠಿಯಲ್ಲಿ ಮಾತನಾಡಿದ ನಿವೇದಿತಾ ಮಹಿಳಾ ಜಾಗೃತಿ ಟ್ರಸ್ಟ್ನ ಅಧ್ಯಕ್ಷೆ ಇಂದಿರಾ ರಾಜಶೇಖರ ರೈ ಇದು ಮಹಳಾ ಸಬಲೀಕರಣಕ್ಕಾಗಿ
ಮಾಡಿದ ಐತಿಹಾಸಿಕ ನಿರ್ಧಾರ. ಈ ಅವಕಾಶವನ್ನು ಬಳಸಿ ಮಹಿಳೆಯರು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂದು ಹೇಳಿದರು. ಮಸೂದೆ ಪಾಸ್ ಮಾಡಿದ ಪ್ರಧಾನಮಂತ್ರಿಯವರನ್ನು ಅಭಿನಂದಿಸುವ ಸಲುವಾಗಿ ಅಕ್ಟೋಬರ್ ಮೊದಲ ವಾರದಲ್ಲಿ ಸುಳ್ಯದಲ್ಲಿ ಮಹಿಳಾ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಒಂದು ವರ್ಷದ ಹಿಂದೆ ಸ್ಥಾಪನೆ:ಗುಣವತಿ ಕೊಲ್ಲಂತ್ತಡ್ಕ
ಟ್ರಸ್ಟ್ನ ಕಾರ್ಯದರ್ಶಿ ಗುಣವತಿ ಕೊಲ್ಲಂತ್ತಡ್ಕ ಮಾತನಾಡಿ
ನೊಂದ ಮಹಿಳೆಯರಿಗೆ ಸಾಂತ್ವನ, ಅಸಹಾಯರಿಗೆ ಸಹಾಯ ಹಸ್ತವನ್ನು ನೀಡುವ ನಿಟ್ಟಿನಲ್ಲಿ ಒಂದು ವರ್ಷದ ಹಿಂದೆ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಸ್ಥಾಪಿಸಲಾಗಿದೆ.16 ಸದಸ್ಯರ ಆಡಳಿತ ಸಮಿತಿ, 25 ಮಂದಿಯ ಅನುಷ್ಠಾನ ಸಮಿತಿ ಕಾರ್ಯನಿರ್ವಹಿಸುತಿದೆ. ವಿವಿಧ ಗ್ರಾಮಗಳಲ್ಲಿ ಸಂಚಲನಾ ಸಮಿತಿ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು. ಮಕ್ಕಳಲ್ಲಿ, ಮಹಿಳೆಯರಲ್ಲಿ ದೇಶ ಭಕ್ತಿ, ಸಂಸ್ಕಾರ, ಸಂಸ್ಕೃತಿ ಉದ್ದೀಪನಗೊಳಿಸುವ ನಿಟ್ಟಿನಲ್ಲಿ ಟ್ರಸ್ಟ್ ಕಾರ್ಯನಿರ್ವಹಿಸುತಿದೆ. ಈ ನಿಟ್ಟಿನಲ್ಲಿ ಬಾಲಗೋಕುಲಂ ಸ್ಥಾಪನೆ, ಭಾರತ ಮಾತಾ ಪೂಜನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ನ ಸಂಘಟನಾ ಕಾರ್ಯದರ್ಶಿ ಪುಷ್ಪಾ ಮೇದಪ್ಪ, ಖಜಾಂಜಿ ಜಯಂತಿ ಜನಾರ್ಧನ, ಸಹ ಖಜಾಂಜಿ ಶಾರದಾ ಶೆಟ್ಟಿ ಉಬರಡ್ಕ, ನಿರ್ದೇಶಕರಾದ ದಿವ್ಯಾ ಮಡಪ್ಪಾಡಿ, ಲೋಲಾಕ್ಷಿ ದಾಸನಕಜೆ, ಸವಿತಾ ಕಾಯಾರ, ವೀಣಾ ಮೋಂಟಡ್ಕ ಉಪಸ್ಥಿತರಿದ್ದರು.









