ಮಂಗಳೂರು: ಮಂಗಳೂರಿನ ರನ್ನರ್ಸ್ ಕ್ಲಬ್ ವತಿಯಿಂದ ನ. 5ರಂದು ನಡೆಸ ನೀವಿಯಸ್ ಮಂಗಳೂರು ಮ್ಯಾರಥಾನ್ನಲ್ಲಿ ಜಸ್ಮಿತಾ ಕೊಡೆಂಕಿರಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಮ್ಯಾರಥಾನ್ನಲ್ಲಿ ಸುಳ್ಯದಿಂದ 30ಕ್ಕೂ ಹೆಚ್ಚು ಮಂದಿ ಭಾಗಚಹಿಸಿದ್ದಾರೆ. ಸುಳ್ಯ ಮ್ಯಾರಥಾನ್ ಕ್ಲಬ್ ಸದಸ್ಯೆಯಾಗಿರುವ ಜಸ್ಮಿತಾ 42 ಕಿ.ಮಿ. ಪೂರ್ಣ ಮ್ಯಾರಥಾನ್ನಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನಿಯಾಗಿದ್ದಾರೆ. ಸುಳ್ಯದಿಂದ

ವಿನಯ್ ನಾರಾಲು, ಅಜಿತ್ ಪೇರಾಲು ಸೇರಿದಂತೆ 30ಕ್ಕೂ ಹೆಚ್ಚು ಮಂದಿ ಮ್ಯಾರಥಾನ್ನಲ್ಲಿ ಭಾಗವಹಿಸಿದ್ದರು. 6 ವರ್ಷದ ಪುಟಾಣಿ ರನ್ನರ್ ಹಂಸಿಕಾ ಅಜಿತ್ ಪೇರಾಲು ಎರಡು ಕಿ.ಮಿ. ಮ್ಯಾರಥಾನ್ನಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಳೆ.ಬಳ್ಪ ಗ್ರಾಮದ ಕೊಡೆಂಕಿರಿ ವಾಚಣ್ಣ ಗೌಡ ಮತ್ತು ದಮಯಂತಿ ದಂಪತಿಗಳ ಪುತ್ರಿಯಾದ ಜಸ್ಮಿತಾ ಕೊಡೆಂಕಿರಿ ಇತ್ತೀಚೆಗೆ ಬೆಳಗಾವಿಯ ಖಾನಾಪುರದಲ್ಲಿ ನಡೆದ ರಾಷ್ಟ್ರಮಟ್ಟದ ಹಾಫ್ ಮ್ಯಾರಥಾನ್(21 ಕಿ.ಮೀ) ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು.
ಇಂದು ನಡೆದ ನೀವಿಯಸ್ ಮ್ಯಾರಥಾನ್ನಲ್ಲಿ ವಿವಿಧ ವಿಭಾಗಗಳಲ್ಲಿ 4 ಸಾವಿರಕ್ಕೂ ಮಿಕ್ಕಿ ರನ್ನರ್ಸ್ ಭಾಗವಹಿಸಿದ್ದರು. 42.2 ಕಿ.ಮೀ. ಪೂರ್ಣ ಮ್ಯಾರಥಾನ್, 21.1 ಕಿ.ಮೀ. ಹಾಫ್ ಮ್ಯಾರಥಾನ್, 10 ಕಿ.ಮೀ., 5 ಕಿ.ಮೀ. ಮತ್ತು 2 ಕಿ.ಮೀ. ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದಾರೆ.









