ಪಟ್ನಾ: ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಸರ್ಕಾರ ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ. 129 ಶಾಸಕರು ನಿತೀಶ್ ಕುಮಾರ್ ಅವರನ್ನು ಬೆಂಬಲಿಸಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷವು ಹದಿನೈದು ದಿನಗಳ ಹಿಂದಷ್ಟೇ
‘ಮಹಾಘಟಬಂಧನ್’ ಮೈತ್ರಿಕೂಟದಿಂದ ಹೊರ ಬಂದು, ಎನ್ಡಿಎ ಜತೆ ಸೇರಿ ಹೊಸ ಸರ್ಕಾರ ರಚಿಸಿತ್ತು. ಈಗ ಬಿಹಾರ ವಿಧಾನಸಭೆ ಸದಸ್ಯರ ಸಂಖ್ಯೆ 243ಕ್ಕೆ ಏರಿಕೆಯಾಗಿದೆ. 243 ಸದಸ್ಯಬಲದ ಬಿಹಾರ ವಿಧಾನಸಭೆಯಲ್ಲಿ ಜೆಡಿಯು 45 ಶಾಸಕರನ್ನು ಹೊಂದಿದೆ. ಬಿಜೆಪಿ ಮತ್ತು ಹಿಂದುಸ್ತಾನಿ ಅವಾಮ್ ಮೋರ್ಚಾ ಕ್ರಮವಾಗಿ 79 ಹಾಗೂ 4 ಶಾಸಕರನ್ನು ಹೊಂದಿವೆ. ಸ್ವತಂತ್ರ ಅಭ್ಯರ್ಥಿಯೊಬ್ಬರ ಬೆಂಬಲದಿಂದ ಈ ಒಕ್ಕೂಟದ ಒಟ್ಟು ಸದಸ್ಯಬಲ 128 ಆಗಲಿದೆ. ಮತ್ತೊಂದೆಡೆ ಮಹಾಘಟಬಂಧನದ ಬಳಿ 115 ಶಾಸಕರ ಬಲವಿದೆ. ಬಹುಮತ ಸಾಬೀತುಪಡಿಸಲು 122 ಸ್ಥಾನಗಳು ಅಗತ್ಯ.
ನಿತೀಶ್ ಕುಮಾರ್ ವಿಶ್ವಾಸಮತ ಸಾಬೀತುಪಡಿಸುತ್ತಿದಂತೆ ವಿರೋಧ ಪಕ್ಷ ಸದಸ್ಯರು ವಿಧಾನಸಭೆಯಿಂದ ಹೊರನಡೆದರು.