ಸುಳ್ಯ: ರಿಕ್ಷಾ ಚಾಲಕರ ಅನುಕೂಲಕ್ಕಾಗಿ ನಿಂತಿಕಲ್ಲು ಪೇಟೆಯಲ್ಲಿ ಕೆಪಿಸಿಸಿ ಸದಸ್ಯ ಹೆಚ್.ಎಂ.ನಂದಕುಮಾರ್ ಅವರು ನಿರ್ಮಿಸಿದ ನೂತನ ರಿಕ್ಷಾ ನಿಲ್ದಾಣದ ಉದ್ಘಾಟನೆ ನ.1ರಂದು ನಡೆಯುತು. ಮಾಜಿ ಸಚಿವರಾದ ಬಿ.ರಮಾನಾಥ ರೈ ರಿಕ್ಷಾ ನಿಲ್ದಾಣವನ್ನು ಉದ್ಘಾಟಿಸಿ ಶುಭ ಹಾರೈಸಿದರು.ಬ್ಲಾಕ್ ಕಾಂಗ್ರೆಸ್ ಸಮಿತಿ ಸುಳ್ಯ, ಬ್ಲಾಕ್ ಕಾಂಗ್ರೆಸ್ ಕಡಬ ಹಾಗು ನಂದಕುಮಾರ್ ಅಭಿಮಾನಿ ಬಳಗದ ವತಿಯಿಂದ ಏರ್ಪಡಿಸಿದ ಸಮಾರಂಭವನ್ನು ಉದ್ಘಾಟಿಸಿದ ಪುತ್ತೂರಿನ ಮಾಜಿ ಶಾಸಕಿ ಟಿ.ಶಕುಂತಳಾ ಶೆಟ್ಟಿ ಮಾತನಾಡಿ ರಿಕ್ಷಾ ನಿಲ್ದಾಣವನ್ನು ನಿರ್ಮಿಸಿ ಕೊಡುವ ಮೂಲಕ
ನಂದಕುಮಾರ್ ಸಮಾಜಕ್ಜೆ ದೊಡ್ಡ ಸಂದೇಶ ನೀಡಿದ್ದಾರೆ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷ ಆಡಳಿತದಲ್ಲಿದ್ದರೂ ಜನರ ಯಾವುದೇ ಕೆಲಸ ಆಗುತ್ತಿಲ್ಲ. ಆದರೆ ಯಾವುದೇ ಅಧಿಕಾರ ಇಲ್ಲದಿದ್ದರೂ ಜನರ ಕೆಲಸವನ್ನು ಮಾಡುವ ಮೂಲಕ ನಂದಕುಮಾರ್ ಮಾದರಿಯಾಗಿದ್ದಾರೆ ಎಂದು ಹೇಳಿದರು.

ನಂದಕುಮಾರ್ ಅವರನ್ನು ಸನ್ಮಾನಿಸಿ ಅಭಿನಂದನಾ ಭಾಷಣ ಮಾಡಿದ ಕೆಪಿಸಿಸಿ ಸದಸ್ಯ ಭರತ್ ಮುಂಡೋಡಿ “ಶ್ರೀಮಂತಿಕೆಯ ಜೊತೆಗೆ ಹೃದಯ ಶ್ರೀಮಂತಿಕೆಯನ್ನು ಹೊಂದಿರುವ ನಂದಕುಮಾರ್ ಜನ ಸಾಮಾನ್ಯರ ಬೇಡಿಕೆಯನ್ನು ಪೂರೈಸುವ ದೊಡ್ಡ ಕೆಲಸವನ್ನು ಮಾಡಿದ್ದಾರೆ.ಕೊರೊನಾ ಸಂದರ್ಭದಲ್ಲಿ, ಮಳೆಯಿಂದ ಜನರು ಸಂಕಷ್ಟ ಅನುಭವಿಸಿದ ಸಂದರ್ಭದಲ್ಲಿ ಆಹಾರ ಕಿಟ್‌ಗಳನ್ನು, ಧನ ಸಹಾಯವನ್ನು ಮಾಡುವ ಮೂಲಕ ಜನರಿಗೆ ಸ್ಪಂದಿಸಿದ್ದರು.ಇದೀಗ ಬಿಸಿಲು,ಮಳೆಯಿಂದ ರಕ್ಷಣೆ ಪಡೆಯಲು ರಿಕ್ಷಾ ಚಾಲಕರಿಗೆ ನೆರವಾಗಲು ಅತ್ಯುತ್ತಮ ರಿಕ್ಷಾ ತಂಗುದಾಣ ನಿರ್ಮಿಸಿದ್ದಾರೆ.
ಪಕ್ಷದ ವರಿಷ್ಠರು ಸುಳ್ಯದಿಂದ ಸ್ಪರ್ಧಿಸಲು ಅವಕಾಶ ನೀಡಿದರೆ, ನಂದಕುಮಾರ್ ಶಾಸಕರಾಗಿ ಬರಬೇಕು, ಅವರನ್ನು ಶಾಸಕರಾಗಿ ಗೆಲ್ಲಿಸಲು ಪ್ರತಿಯೊಬ್ಬರೂ ಕಂಕಣ ಬದ್ಧರಾಗಬೇಕು. ಈ ಬಾರಿ ಜನರು ಬದಲಾವಣೆ ತರುತ್ತಾರೆ ಎಂಬ ಆತ್ಮ ವಿಶ್ವಾಸ ಇದೆ ಎಂದು ಭರತ್ ಮುಂಡೋಡಿ ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಂದಕುಮಾರ್
ರಾಜಕೀಯ ಲಾಭದ ಉದ್ದೇಶದಿಂದ ಯಾವುದೇ ಕೆಲಸ ಮಾಡುವುದಿಲ್ಲ. ಜನರ ಬೇಡಿಕೆ, ಜನರು ಇರಿಸಿದ ಭರವಸೆಯನ್ನು ಈಡೇರಿಸಲು
ನನ್ಬ ಆದಾಯದ ಒಂದು ಪಾಲನ್ನು ಜನರ ಸಹಾಯಕ್ಕೆ ಮೀಸಲಿಟ್ಟಿದ್ದೇನೆ.
ಚುನಾವಣೆಯಲ್ಲಿ ಟಿಕೆಟ್ ಸಿಗುತ್ತದಾ ಇಲ್ಲವಾ ಗೊತ್ತಿಲ್ಲ. ಪಕ್ಷ ಸಂಘಟನೆಗೆ ನನ್ನನ್ನು ಮುಖಂಡರು ಕಳಿಸಿಕೊಟ್ಟಿದ್ದಾರೆ. ನನ್ನ ಕೈಲಾದ ಸಂಘಟನಾ ಕೆಲಸವನ್ನು ಮಾಡುತ್ತಾ ಕಾರ್ಯಕರ್ತರ, ಜನರ ಬೇಡಿಕೆಗಳಿಗೆ ಸ್ಪಂದಿಸುತ್ತಾ ಇದ್ದೇನೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಮಾತನಾಡಿ ನಂದಕುಮಾರ್ ಅವರು ಜನರಿಗೆ, ಸಮಾಜಕ್ಕೆ ಮಾಡುವ ಈ ಸಹಾಯ ಹಾಗು ಜನಪರ ಕೆಲಸಗಳು ಕಾಂಗ್ರೆಸ್ ಪಕ್ಷಕ್ಕೆ ಹೆಮ್ಮೆ ಎಂದು ಹೇಳಿದರು.ಕಳೆದ 28 ವರ್ಷದಲ್ಲಿ ಶಾಸಕ ಎಸ್.ಅಂಗಾರ ಅವರು ಸುಳ್ಯ ಕ್ಷೇತ್ರದಲ್ಲಿ ಒಂದೇ ಒಂದು ರಿಕ್ಷಾ ನಿಲ್ದಾಣವನ್ನೂ ಮಾಡಿಲ್ಲ ಪಿ.ಸಿ.ಜಯರಾಮ ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ ಮಾತನಾಡಿ ‘ಉತ್ತಮ ಸಮಾಜ ಸೇವಕನನ್ನು ಕೆಪಿಸಿಸಿ ನೀಡಿದೆ. ನಂದಕುಮಾರ್ ಅವರ ಸೇವೆಯನ್ನು ಕ್ಷೇತ್ರದಲ್ಲಿ ಉಳಿಸಿಕೊಳ್ಳಲು ಕಾರ್ಯಕರ್ತರು ಪ್ತಯತ್ನ ನಡೆಸಬೇಕು. ಕೆಪಿಸಿಸಿ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಟ್ಟರೆ ಅವರನ್ನು ಶಾಸಕರಾಗಿ ಗೆಲ್ಲಿಸುವ ಸಂಕಲ್ಪವನ್ನು ಪ್ರತಿಯೊಬ್ಬ ಕಾರ್ಯಕರ್ತರು ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್‌ಕುಮಾರ್ ಶೆಟ್ಟಿ ಮಾತನಾಡಿ ಸುಳ್ಯದ ಶಾಸಕರಾಗಿ ಹೆಚ್.ಎಂ. ನಂದಕುಮಾರ್ ಗೆದ್ದು ಬರಲಿ ಎಂದು ಆಶಿಸಿದರು.
ನಿಂತಿಕಲ್ಲು ಕೋಟಿ ಚೆನ್ನಯ್ಯ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಮಾಧವ ಕೇರ್ಪಡ ಉಪಸ್ಥಿತರಿದ್ದರು..ಕಾಂಗ್ರೆಸ್ ಜಿಲ್ಲಾ ಸಾಮಾಜಿಕ ಜಾಲತಾಣದ ಪ್ರಧಾನ ಕಾರ್ಯದರ್ಶಿ ಎನ್.ಟಿ.ವಸಂತ ಸ್ವಾಗತಿಸಿ, ರಮೇಶ್ ಕೋಟೆ ವಂದಿಸಿದರು. ಅಶೋಕ್ ಚೂಂತಾರು ಕಾರ್ಯಕ್ರಮ ನಿರೂಪಿಸಿದರು.
ಕಾಂಗ್ರೆಸ್ ಮುಖಂಡರಾದ ಟಿ.ಎಂ.ಶಹೀದ್ ತೆಕ್ಕಿಲ್, ಎಂ.ವೆಂಕಪ್ಪ ಗೌಡ, ಎಸ್.ಸಂಶುದ್ದೀನ್, ಕೆ.ಗೋಕುಲ್‌ದಾಸ್, ವಿಜಯಕುಮಾರ್ ರೈ, ಬಾಲಕೃಷ್ಣ ಬಳ್ಳೇರಿ, ಸೈಮನ್.ಸಿ.ಜೆ, ಗಣೇಶ್ ಕೈಕುರೆ, ಥಾಮಸ್ ಇಡಯಾಲ, ಅಬ್ದುಲ್ ಗಫೂರ್, ಇಸ್ಮಾಯಿಲ್ ಪಡ್ಪಿನಂಗಡಿ, ಸರಸ್ವತಿ ಕಾಮತ್, ಚಂದ್ರಶೇಖರ ಕಾಮತ್, ಜಗನ್ನಾಥ ಪೂಜಾರಿ, ಶರೀಫ್ ಕಂಠಿ, ಲೋಕನಾಥ ರೈ, ಮಾಯಿಲಪ್ಪ ಗೌಡ, ಸಚಿನ್ ರಾಜ್ ಶೆಟ್ಟಿ, ಪ್ರವೀಣಾ ಮರುವಂಜ, ಹಾಜಿರಾ ಅಬ್ದುಲ್ ಗಫೂರ್, ರಾಜೀವಿ, ಚೇತನ್ ಕಜೆಗದ್ದೆ, ಸತ್ಯಕುಮಾರ್ ಆಡಿಂಜ ಮತ್ತಿತರರು ಉಪಸ್ಥಿತರಿದ್ದರು.