ಸುಳ್ಯ:ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸುಳ್ಯ ನೆಹರೂ ಸ್ಮಾರಕ ಮಹಾ ವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳಿಂದ ಶಿಷ್ಯರ ನಡೆ ಗುರುಗಳ ಕಡೆ ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಪ್ರೊ. ನಿಂಗೇಗೌಡ ಅವರನ್ನು ಸುಳ್ಯ ಹಳೆಗೇಟಿನ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.
ಸುಳ್ಯ ತಾಲೂಕು
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರ ಶೇಖರ ಪೆರಾಲು ನಿಂಗೇ ಗೌಡ ದಂಪತಿಗಳನ್ನು ಸನ್ಮಾನಿಸಿದರು.ದಿನೇಶ್ ಮಡಪ್ಪಾಡಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ,
ಸೂಡ ಅಧ್ಯಕ್ಷ ಕೆ. ಎಂ.ಮುಸ್ತಫ,
ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಟಿ. ಎಂ. ಶಹೀದ್ ತೆಕ್ಕಿಲ್, ಕೆವಿಜಿ ಸುಳ್ಯ ಹಬ್ಬ ಸಮಿತಿ ಅಧ್ಯಕ್ಷ ಕೆ. ಟಿ. ವಿಶ್ವನಾಥ್, ಪ್ರಮುಖರಾದ ಎಸ್. ಸಂಶುದ್ದೀನ್, ಪಿ. ಎ. ಮಹಮ್ಮದ್, ಚಂದ್ರಾವತಿ ಬಡ್ಡಡ್ಕ, ಲತಾ ಕುದ್ಪಾಜೆ, ಯತಿ ರಾಜ ಭೂತಕಲ್ಲು, ಬಾಲಗೋಪಾಲ ಸೇರ್ಕಜೆ, ಪುರುಷೋತ್ತಮ ಕೋಲ್ಚಾರ್ ಸುದರ್ಶನ್ ಕೊಯಿಂಗೋಡಿ, ರಾಕೇಶ್ ಕುಂಟಿಕಾನ , ಅಂಬೆಕಲ್ಲು, ನಿಂಗೇ ಗೌಡರ ಪುತ್ರ ಭಾನು ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.












