ಸುಳ್ಯ:ರಾಷ್ಟ್ರ ಚಿಂತನ ವೇದಿಕೆ ಸುಳ್ಯ, ಬಿಎಂಎಸ್ ಮಜ್ದೂರ್ ಸಂಘ ಸಂಯೋಜಿತ ಸುಳ್ಯ ತಾಲೂಕು ರಿಕ್ಷಾ ಚಾಲಕರ ಸಂಘ, ರಂಗಭೂಮಿ ಟ್ರಸ್ಟ್ ಕೊಡಗು ಪ್ರಸ್ತುತಪಡಿಸುವ ‘ನಿಜ ಮಹಾತ್ಮ ಬಾಬಾಸಾಹೇಬ’ ನಾಟಕವು ಡಿ.16ರಂದು ಸಂಜೆ 5.30ರಿಂದ ಯುವ ಜನ ಸಂಯುಕ್ತ ಮಂಡಳಿಯ ರಂಗ ಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮದ
ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಕಲ್ಕುಡ ದೈವಸ್ಥಾನದ ಸನ್ನಿಧಿಯಲ್ಲಿ ನಡೆಯಿತು.ರಾಷ್ಟ್ರ ಚಿಂತನ ವೇದಿಕೆಯ ಸಂಚಾಲಕ ಹರೀಶ್ ಕಂಜಿಪಿಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ರಾಷ್ಟ್ರ ಚಿಂತನ ವೇದಿಕೆಯ ಸಹ ಸಂಚಾಲಕ ಪಿ.ಕೆ ಉಮೇಶ್, ಸದಸ್ಯರಾದ ಎ.ವಿ ವಿಕ್ರಂ ಅಡ್ಪಂಗಾಯ, ಸುಳ್ಯ ತಾಲೂಕು ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಪ್ರಕಾಶ್,ಉಪಾಧ್ಯಕ್ಷ ಪ್ರಶಾಂತ್ ಭಟ್, ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್ ಎಂ ಶಾಂತಿನಗರ, ಕೋಶಾಧಿಕಾರಿ ರವಿ.ಎಸ್, ಸುನಿಲ್ ಕೇರ್ಪಳ, ತಿಮ್ಮಪ್ಪ ನಾವೂರು, ಸೋಮನಾಥ ಕೆ ಮತ್ತಿತರರು ಉಪಸ್ಥಿತರಿದ್ದರು.













