ಸುಳ್ಯ:ರಾಷ್ಟ್ರ ಚಿಂತನ ವೇದಿಕೆ ಸುಳ್ಯ, ಬಿಎಂಎಸ್ ಮಜ್ದೂರ್ ಸಂಘ ಸಂಯೋಜಿತ ಸುಳ್ಯ ತಾಲೂಕು ರಿಕ್ಷಾ ಚಾಲಕರ ಸಂಘ, ರಂಗಭೂಮಿ ಟ್ರಸ್ಟ್ ಕೊಡಗು ಪ್ರಸ್ತುತಪಡಿಸುವ ‘ನಿಜ ಮಹಾತ್ಮ ಬಾಬಾಸಾಹೇಬ’ ನಾಟಕವು ಡಿ.16ರಂದು ಸಂಜೆ ಸುಳ್ಯದ

ಯುವ ಜನ ಸಂಯುಕ್ತ ಮಂಡಳಿಯ ರಂಗ ಮಂದಿರದಲ್ಲಿ ಪ್ರದರ್ಶನಗೊಂಡಿತು. ಬಾಬಾ ಸಾಹೇಬ್ ಅಂಬೆಡ್ಕರ್ ಕುರಿತಾಗಿ ನಿಜ ಸತ್ಯಗಳನ್ನು ಹಾಗೂ ಜೀವನ ಚರಿತ್ರೆಯನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಮೈಸೂರು ರಂಗಾಯಣದ ಮಾಜಿ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ರಚನೆ ನಿರ್ದೇಶನದ ನಾಟಕ ಪ್ರದರ್ಶನಗೊಂಡಿತು. ಸುಳ್ಯ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ಮಂದಿ ಆಗಮಿಸಿ ನಾಟಕವನ್ನು ವೀಕ್ಷಿಸಿದರು. ನಾಟಕದ ಉಚಿತ ಪ್ರದರ್ಶನ ಏರ್ಪಡಿಸಲಾಗಿತ್ತು.














