ಸುಳ್ಯ:ರಾಷ್ಟ್ರ ಚಿಂತನ ವೇದಿಕೆ ಸುಳ್ಯ, ಬಿಎಂಎಸ್ ಮಜ್ದೂರ್ ಸಂಘ ಸಂಯೋಜಿತ ಸುಳ್ಯ ತಾಲೂಕು ರಿಕ್ಷಾ ಚಾಲಕರ ಸಂಘ, ರಂಗಭೂಮಿ ಟ್ರಸ್ಟ್ ಕೊಡಗು ಪ್ರಸ್ತುತಪಡಿಸುವ ‘ನಿಜ ಮಹಾತ್ಮ ಬಾಬಾಸಾಹೇಬ’ ನಾಟಕವು ಡಿ.16ರಂದು ಸಂಜೆ 5.30ರಿಂದ ಯುವ ಜನ ಸಂಯುಕ್ತ ಮಂಡಳಿಯ ರಂಗ ಮಂದಿರದಲ್ಲಿ ನಡೆಯಲಿದೆ ಎಂದು
ರಾಷ್ಟ್ರ ಚಿಂತನ ವೇದಿಕೆಯ ಸಂಚಾಲಕ ಹರೀಶ್ ಕಂಜಿಪಿಲಿ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬಾಬಾ ಸಾಹೇಬ್ ಅಂಬೆಡ್ಕರ್ ಕುರಿತಾಗಿ ನಿಜ ಸತ್ಯಗಳನ್ನು ಹಾಗೂ ಜೀವನ ಚರಿತ್ರೆಯನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಮೈಸೂರು ರಂಗಾಯಣದ ಮಾಜಿ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ರಚನೆ ನಿರ್ದೇಶನದ ನಾಟಕ ಪ್ರದರ್ಶನಗೊಳ್ಳಲಿದೆ. ಕಳೆದ ಭಾರಿ ರಾಷ್ಟ್ರ ಚಿಂತನ ವೇದಿಕೆ ವತಿಯಿಂದ ‘ಸತ್ಯವನ್ನು ಹೇಳುತ್ತೆನೆ’ ನಾಟಕ ಸುಳ್ಯದಲ್ಲಿ ಅಭೂತಪೂರ್ವ ಯಶಸ್ವಿ ಪ್ರದರ್ಶನ ಕಂಡಿದ್ದು ಈ ಬಾರಿ ಮೀಸಲು ಕ್ಷೇತ್ರವಾದ ಸುಳ್ಯದಲ್ಲಿ
ಅಂಬೆಡ್ಕರ್ ಕೊಡುಗೆ ತ್ಯಾಗ ಬಲಿದಾನಗಳು ಸೇರಿದಂತೆ ಅವರ ನಿಜ ಜೀವನ ಆಧಾರಿತ ಕಥೆಯನ್ನು ಈ ನಾಟಕದಲ್ಲಿ ಪ್ರಸ್ತುತ ಪಡಿಸಲಾಗುತ್ತಿದೆ. ಈ ಪ್ರದರ್ಶನವು ಸಂಪೂರ್ಣ ಉಚಿತವಾಗಿದ್ದು ಅಂಬೆಡ್ಕರ್ ಜೀವನ ಯಶೋಗಾಥೆಯನ್ನು ತಾಲೂಕಿನ ಜನತೆ ಅರಿತುಕೊಳ್ಳಲು ಈ ಪ್ರದರ್ಶನ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ರಾಷ್ಟ್ರ ಚಿಂತನ ವೇದಿಕೆಯ ಸಹ ಸಂಚಾಲಕ ಪಿ.ಕೆ ಉಮೇಶ್ , ಸದಸ್ಯರಾದ ಎ.ವಿ ವಿಕ್ರಂ ಅಡ್ಪಂಗಾಯ, ಸುಳ್ಯ ತಾಲೂಕು ರಿಕ್ಷಾ ಚಾಲಕರ ಸಂಘದ ಉಪಾಧ್ಯಕ್ಷ ಪ್ರಶಾಂತ್ ಭಟ್, ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್ ಎಂ ಶಾಂತಿನಗರ, ಜೊತೆ ಕಾರ್ಯದರ್ಶಿ ಸುರೇಂದ್ರ ಕಾಮತ್, ರಾಷ್ಟ್ರ ಚಿಂತನ ವೇದಿಕೆಯ ಸದಸ್ಯರಾದ ಚಿನಿಯ ಕಲ್ತಡ್ಕ, ಸೋಮನಾಥ ಕೆ, ಸುನಿಲ್ ಕೇರ್ಪಳ, ರಿಕ್ಷಾ ಚಾಲಕ ಸಂಘದ ಕೋಶಾಧಿಕಾರಿರವಿ ಎಸ್ ಜಾಲ್ಸೂರು, ಸಂಘಟನಾ ಕಾರ್ಯದರ್ಶಿ ಸುಂದರ ಪೆರಾಜೆ ಉಪಸ್ಥಿತರಿದ್ದರು.













