ವೆಲ್ಲಿಂಗ್ಟನ್: ಫಾಲೋ-ಆನ್ಗೆ ಸಿಲುಕಿದರೂ ನ್ಯೂಝಿಲ್ಯಾಂಡ್ಗೆ ಮಂಗಳವಾರ ಕೊನೆಗೊಂಡ ಟೆಸ್ಟ್ನಲ್ಲಿ ಇಂಗ್ಲೆಂಡ್ ವಿರುದ್ಧ 1 ರನ್ ರೋಚಕ ಜಯ. ನ್ಯೂಝಿಲ್ಯಾಂಡ್ ತಂಡ ಇಂಗ್ಲೆಂಡ್ಗೆ ಗೆಲ್ಲಲು 258 ರನ್ಗಳ ಗುರಿಯನ್ನು ನೀಡಿತ್ತು, ಆದರೆ ಇಂಗ್ಲೆಂಡ್ ತಂಡ 256 ರನ್ಗಳಿಗೆ ಆಲೌಟ್ ಆಯಿತು. 2 ಪಂದ್ಯಗಳ ಸರಣಿಯು 1-1ರಿಂದ ಸಮಬಲವಾಯಿತು.ನ್ಯೂಝಿಲ್ಯಾಂಡ್ ಮೊದಲ ಇನಿಂಗ್ಸ್ ನಲ್ಲಿ 209 ಕ್ಕೆ
ಆಲೌಟ್ ಅಯಿತು. ನಂತರ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ ಅನ್ನು 435-8 ಕ್ಕೆ ಡಿಕ್ಲೇರ್ ಮಾಡುವ ಮೂಲಕ ಗೆಲುವಿನ ಹಾದಿಯಲ್ಲಿತ್ತು. ಮಾಜಿ ನಾಯಕ ಕೇನ್ ವಿಲಿಯಮ್ಸನ್ ಸೋಮವಾರ ಅಮೋಘ 132 ರನ್ಗಳೊಂದಿಗೆ ನ್ಯೂಝಿಲ್ಯಾಂಡ್ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 483 ರನ್ ಗಳಿಸಿ ಪಂದ್ಯದಲ್ಲಿ ಮರು ಹೋರಾಟ ನೀಡಲು ನೆರವಾದರು.1 ವಿಕೆಟ್ ನಷ್ಟಕ್ಕೆ 48 ರನ್ ನಿಂದ 2ನೇ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ಮಂಗಳವಾರ ಬೆಳಿಗ್ಗೆ ಕೇವಲ 27 ರನ್ಗಳಿಗೆ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡು ತತ್ತರಿಸಿತು. ಜೋ ರೂಟ್ ತಂಡವನ್ನು ಆಧರಿಸಲು ಯತ್ನಿಸಿದರು. ಆದರೆ ರೂಟ್ ಅವರು ತಂಡಕ್ಕೆ ಗೆಲುವು ತಂದುಕೊಡಲಿಲ್ಲ. ಈ ಗೆಲುವಿನೊಂದಿಗೆ ನ್ಯೂಝಿಲ್ಯಾಂಡ್ ಫಾಲೋ ಆನ್ ನಂತರ ಟೆಸ್ಟ್ ಫಾಲೋ ಆನ್ಗೆ ಸಿಲುಕಿದ ನಂತರ ತಂಡವೊಂದು ಟೆಸ್ಟ್ ಗೆದ್ದ ನಾಲ್ಕನೇ ನಿದರ್ಶನ ಇದಾಗಿದೆ. 1894 ಹಾಗೂ 1981 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಎರಡು ಬಾರಿ ಈ ಸಾಧನೆ ಮಾಡಿತ್ತು. ಭಾರತ 2001 ರಲ್ಲಿ ಆಸ್ಟ್ರೇಲಿಯವನ್ನು ಸೋಲಿಸಿತ್ತು.