ಸುಳ್ಯ:ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲಾಯಿತು ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ ವಿ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಸಂದೇಶ ನೀಡಿದರು.
ಮೂರನೇ ತರಗತಿಯ
ವಿದ್ಯಾರ್ಥಿಗಳ ಹಾಡು, ನೃತ್ಯ, ಶುಭಾಶಯ ಸಂದೇಶಗಳು ಗಮನ ಸೆಳೆದವು.
ದಿಯನ್ ಸಚಿನ್ ಹಾಗೂ ಮಶಿತ ನಜ್ವ ಕಾರ್ಯಕ್ರಮ ನಿರೂಪಿಸಿದರು.ಈ ದಿನದ ವಿಶೇಷತೆಯ ಬಗ್ಗೆ ಅಹಮದ್ ಹಾದಿ ಅವರು ತಿಳಿಸಿದರು. ಶಿಕ್ಷಕಿಯರಾದ ಭವ್ಯ ಕೆ ಮತ್ತು ಸೌಜನ್ಯ ಸಹಕರಿಸಿದರು.
ಈ ಸಂದರ್ಭದಲ್ಲಿ ಕೆವಿಜಿ ಸುಳ್ಯ ಹಬ್ಬ ಆಚರಣೆ-2025ರ ಕನ್ನಡ ಗೀತಾ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನಿಯಾದ ಆರನೇ ತರಗತಿಯ ಮನಸ್ವಿ. ಡಿ ಮತ್ತು ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನಿಗಳಾದ 9ನೇ ತರಗತಿಯ ಪ್ರತೀಕ್ಷ, ಅಮೂಲ್ಯ ಡಿ, ಮಾನ್ವಿ ಎ ವೈ, ಎಂಟನೇ ತರಗತಿಯ ಸಾನಿಧ್ಯ ಕೆ, ಮಾನ್ಯ ಕೆ, ಅಮೃತ ಎಂ ರೈ,
ಶ್ರೀಹಿತ ಎಂ ಎಸ್, ಮೈಥಿಲಿ ಎ. ಎಮ್ ಇವರನ್ನು ಅಭಿನಂದಿಸಲಾಯಿತು.












