ವೆಲ್ಲಿಂಗ್ಟನ್: 2025ಕ್ಕೆ ಬೈ ಹೇಳಿ 2026ನ್ನು ಸ್ವಾಗತಿಸಲಾಗಿದೆ.
ನ್ಯೂಜಿಲೆಂಡ್ನ ಹೊಸ ವರ್ಷ ಆಚರಿಸಿದ ಮೊದಲ ದೇಶ. ನ್ಯೂಜಿಲ್ಯಾಂಡ್ನ ಉತ್ತರ ದ್ವೀಪದ ಪ್ರಮುಖ ಪಟ್ಟಣ ಆಕ್ಲೆಂಡ್ನಲ್ಲಿ ಬಾನೆತ್ತರಕ್ಕೆ ಚಿಮ್ಮಿದ ಪಟಾಕಿಯ ಬೆಳಕಿನ ಚಿತ್ತಾರದೊಂದಿಗೆ ಹೊಸವರ್ಷದ ಸಂಭ್ರಮಾಚರಣೆಗೆ
ವಿಶ್ವವು ಮುನ್ನುಡಿ ಬರೆಯಿತು.240 ಮೀಟರ್ ಎತ್ತರದ ಪ್ರಖ್ಯಾತ ಸ್ಕೈ ಟವರ್ನ ವಿವಿಧ ಮಹಡಿಗಳಿಂದ 3,500ಕ್ಕೂ ಅಧಿಕ ಪಟಾಕಿಗಳನ್ನು ಸಿಡಿಸಿ, ಜನರು 2026ನೇ ವರ್ಷವನ್ನು ಬರಮಾಡಿಕೊಂಡರು.
ನ್ಯೂಯಾರ್ಕ್ನ ಟೈಮ್ ಸ್ಕ್ವೇರ್ನಲ್ಲಿ ಬಾಲ್ ಡ್ರಾಪ್ ಮೂಲಕ ಹೊಸವರ್ಷದ ಶುಭಾರಂಭ ಮಾಡುವ 18 ಗಂಟೆಗೂ ಮುಂಚೆಯೇ ಆಕ್ಲೆಂಡ್ನಲ್ಲಿ ಹರ್ಷೋದ್ಘಾರದೊಂದಿಗೆ ಆಚರಣೆ ಶುರುವಾಯಿತು.
ನ್ಯೂಜಿಲೆಂಡ್ನ ಸಂಭ್ರಮದ 2 ಗಂಟೆಯ ಬಳಿಕ ಆಸ್ಟ್ರೇಲಿಯಾದಲ್ಲೂ ಪಟಾಕಿಗಳ ಚಿತ್ತಾರದೊಂದಿಗೆ ಆಚರಣೆ ಆರಂಭಗೊಂಡಿದೆ. 2025ಕ್ಕೆ ಬೀಳ್ಕೊಡುಗೆ ನೀಡಿ, ಉಕ್ರೇನ್ನಲ್ಲಿ ಶಾಂತಿ ಸ್ಥಾಪನೆಯಾಗುವ ಭರವಸೆಯೊಂದಿಗೆ 2026ಕ್ಕೆ ಜನರು ಸ್ವಾಗತ ಕೋರಿದ್ದಾರೆ.















