ಸುಳ್ಯ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮೇಲೆ ಲೀಟರ್ಗೆ ತಲಾ ರೂ. 2 ಕಡಿತ ಮಾಡಲಾಗಿದೆ. ಶುಕ್ರವಾರ ಬೆಳಗ್ಗಿನಿಂದ ಪರಿಷ್ಕೃತ ದರ ಜಾರಿಗೆ ಬಂದಿದೆ. ದರ ಕಡಿತದ ಬಳಿಕ ಸುಳ್ಯ ನಗರದಲ್ಲಿ ಪೆಟ್ರೋಲ್ ದರ ಲೀಟರ್ಗೆ ರೂ.99.89, ಡೀಸೆಲ್ ದರ ಲೀಟರ್ಗೆ ರೂ.85.95ರೂಗೆ ಇಳಿದಿದೆ. ಪವರ್ ಪೆಟ್ರೋಲ್ ದರ ರೂ ಲೀ.107.01, ಬಯೋ ಡೀಸೆಲ್ ದರ ಲೀಟರ್ಗೆ ರೂ. 89.44 ಇದೆ.
ಚುನಾವಣೆ ಘೋಷಣೆ ಸಮೀಪದಲ್ಲಿರುವಾಗಲೇ ತೈಲ ಕಂಪನಿಗಳು ಬೆಲೆ ಕಡಿತ ಮಾಡಿದೆ. ಪರಿಷ್ಕೃತ ಬೆಲೆಯು ಶುಕ್ರವಾರ (ಮಾರ್ಚ್ 15) ಬೆಳಿಗ್ಗೆ 6ರಿಂದ ಜಾರಿಗೆ ಬಂದಿದೆ.
previous post