ಸುಳ್ಯ: ಸುಳ್ಯ ಮಿರರ್ ಡಿಜಿಟಲ್ ಮಾಧ್ಯಮದಲ್ಲಿ ಹೊಸ ಅಂಕಣ ‘ಕಾಮನಬಿಲ್ಲು’ ಮೇ.19ರಿಂದ ಮೂಡಿ ಬರಲಿದೆ. ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರಾದ ಎಂ.ನಾ.ಚಂಬಲ್ತಿಮಾರ್ ಅವರ ಅಂಕಣ ಪ್ರತಿ ಸೋಮವಾರ ಪ್ರಕಟವಾಗಲಿದೆ.’ಕಣಿಪುರ’ ಯಕ್ಷಗಾನ ಮಾಸ ಪತ್ರಿಕೆ ಹಾಗೂ ಕಣಿಪುರ ಡಿಜಿಟಲ್ ಮಾಧ್ಯಮದ ಸಂಪಾದಕರಾದ ಎಂ.ನಾ.ಅವರ ಅಂಕಣ ‘ಗಡಿನಾಡ ದಡದಿಂದ’ ಈ ಹಿಂದೆ ಸುಳ್ಯ ಮಿರರ್ನಲ್ಲಿ ಪ್ರಕಟವಾಗಿತ್ತು. ಆಕರ್ಷಕ ಶೈಲಿಯ ಬರಹಗಾರರಾದ ಎಂ.ನಾ. ಅವರ ಬರಹಗಳು ಕೆಲ ಕಾಲದ ಬಿಡುವಿನ ಬಳಿಕ ಸುಳ್ಯ ಮಿರರ್ ಓದುಗರಿಗಾಗಿ ಪ್ರಕಟಗೊಳ್ಳಲಿದೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post