ಮುಕ್ಕೂರು: ಮುಕ್ಕೂರು ನೇಸರ ಯುವಕ ಮಂಡಲದ ಎರಡು ದಿನಗಳ ದಶಪ್ರಣತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು ಶಾಶ್ವತ ಯೋಜನೆಗಳ ಲೋಕಾರ್ಪಣೆಯು ನಡೆಯಿತು.ಕುಂಡಡ್ಕದಲ್ಲಿ ಅಶಕ್ತ ಕುಟುಂಬಕ್ಕೆ ನಿರ್ಮಿಸಿದ ನೇಸರ ನಿಲಯ ಹಸ್ತಾಂತರ ನೆರವೇರಿಸಿ ಮಾತನಾಡಿದ ಮಾಜಿ ಸಂಸದ, ದಶಪ್ರಣತಿ ಸಮಿತಿ ಗೌರವಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ನೊಂದವರ ಬಾಳಿಗೆ
ಬೆಳಕು ಹರಿಸುವ ಮೂಲಕ ನೇಸರ ಯುವಕ ಮಂಡಲ ಸಮಾಜಕ್ಮೆ ಮಾದರಿ ಕಾರ್ಯ ಮಾಡಿದೆ. ಇದು ಶ್ಲಾಘನೀಯ ಕಾರ್ಯ ಎಂದರು.
ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ಮುಕ್ಕೂರು ಅಂಗನವಾಡಿಯ ನೇಸರ ಉದ್ಯಾನವನದಲ್ಲಿ ಗಿಡ ನೆಟ್ಟು ಮಾತನಾಡಿ,ಯುವಕ ಮಂಡಲದ ಕಾರ್ಯ ಅತ್ಯಂತ ಪ್ರಶಂಸನೀಯ.ಶಾಶ್ವತ ಯೋಜನೆಗಳ ಅನುಷ್ಠಾನದಿಂದ ದಶ ಪ್ರಣತಿ ಕಾರ್ಯಕ್ರಮಕ್ಕೆ ನಿಜವಾದ ಅರ್ಥ ಬಂದಿದೆ. ನೇಸರ ಯುವಕ ಮಂಡಲ ತನ್ನ ಸಮಾಜಮುಖಿ ಕಾರ್ಯಗಳಿಂದ ರಾಜ್ಯಾದ್ಯಂತ ಹೆಸರು ಪಡೆಯಲಿ ಎಂದರು.
ಶಾಶ್ವತ ಯೋಜನೆಗಳ ಲೋಕಾರ್ಪಣೆ:ಬೆಳಗ್ಗೆ ಪ್ರಗತಿಪರ ಕೃಷಿಕರಾದ ಅನಿತಾ ಟಿ ಭಟ್ ಧ್ವಜಾರೋಹಣ ನೆರವೇರಿಸಿದರು. ಮುಕ್ಕೂರು ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಜಯಂತ ಗೌಡ ಅಧ್ಯಕ್ಷತೆ ವಹಿಸಿದರು. ನೇಸರ ದಶಪ್ರಣತಿ ಸಮಿತಿ ಉಪಾಧ್ಯಕ್ಷರಾದ ಚಂದ್ರಹಾಸ ರೈ ಮುಕ್ಕೂರು ಉಪಸ್ಥಿತರಿದ್ದರು. ದಶಪ್ರಣತಿ ಪ್ರಯುಕ್ತ ಅಶಕ್ತ ಕುಟುಂಬಕ್ಕೆ ಕುಂಡಡ್ಕದಲ್ಲಿ

ನಿರ್ಮಿಸಿದ ನೇಸರ ನಿಲಯದ ಉದ್ಘಾಟನೆಯನ್ನು ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ನೆರವೇರಿಸಿದರು. ನೇಸರ ದಶಪ್ರಣತಿ ಸಮಿತಿ ಉಪಾಧ್ಯಕ್ಷ ಸುಬ್ರಾಯ ಭಟ್ ನೀರ್ಕಜೆ ನೇಸರ ಸ್ವಂತಿಮೂಲೆ ಅನಾವರಣ ಮಾಡಿದರು. ಮುಕ್ಕೂರು ಅಂಗನವಾಡಿ ಉದ್ಯಾನವನದ ಪ್ರಥಮ ಹಂತದ ಕಾಮಗಾರಿಯನ್ನು ಪ್ರಗತಿಪರ ಕೃಷಿಕ ಗೋಪಾಲ ಸುವರ್ಣ ಬಿ.ಕೆ ಅವರು ಉದ್ಘಾಟಿಸಿದರು. ಸಾಲು ಮರ ತಿಮ್ಮಕ್ಕ ಸ್ಮರಣಾರ್ಥ ಪ್ರಗತಿಪರ ಕೃಷಿಕರಾದ ಸಂಪತ್ ಕುಮಾರ್ ರೈ ಪಾತಾಜೆ, ಮೋಹನ ಬೈಪಾಡಿತ್ತಾಯ, ಸುಬ್ಬಣ್ಣ ದಾಸ್ ಚೆನ್ನಾವರ,ಗ್ರಾಮ ಪಂಚಾಯತ್

ಸದಸ್ಯೆ ಗುಲಾಬಿ ಬೊಮ್ಮೆಮಾರು, ಮುಕ್ಕೂರು ಶಾಲಾ ಮುಖ್ಯಗುರು ಲತಾ, ನಿವೃತ್ತ ಬ್ಯಾಂಕ್ ಉದ್ಯೋಗಿ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು, ಉದ್ಯಮಿ ರಫೀಕ್ ಸವಣೂರು, ಧಾರ್ಮಿಕ ಪರಿಚಾರಕ ಕೃಷ್ಣಪ್ಪ ನಾಯ್ಕಅಡ್ಯತಕಂಡ ಅವರು ಗಿಡ ನೆಟ್ಟು ಚಾಲನೆ ನೀಡಿದರು.
ನೇಸರ ದಶಪ್ರಣತಿ ಸಮಿತಿ-2026 ಅಧ್ಯಕ್ಷ ಡಾ.ನರಸಿಂಹ ಶರ್ಮ ಕಾನಾವು, ನೇಸರ ದಶಪ್ರಣತಿ ಸಮಿತಿ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಪೂಜಾರಿ ಮುಕ್ಕೂರು, ನೇಸರ ದಶಪ್ರಣತಿ ಸಮಿತಿ ಸಂಚಾಲಕ ಕುಂಬ್ರ ದಯಾಕರ ಆಳ್ವ ಸಹಿತ ವಿವಿಧ ಗಣ್ಯರು ಉಪಸ್ಥಿತರಿದ್ದರು.












