ಸುಳ್ಯ:ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹಾರ್ ಲಾಲ್ ನೆಹರೂ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.ಅಧ್ಯಕ್ಷತೆಯನ್ನು
ಸುಳ್ಯ ಬ್ಲಾಕ್ ಉಪಾಧ್ಯಕ್ಷ ದಿನೇಶ್ ಅಂಬೆಕಲ್ಲು ವಹಿಸಿದ್ದರು.ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ.ಎಂ.ಮುಸ್ತಫ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ಯಾರಂಟಿ ಸಮಿತಿ ಸದಸ್ಯ ಭವಾನಿ ಶಂಕರ್ ಕಲ್ಮಡ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಶರೀಫ್ ಕಂಠಿ, ಧೀರ ಕ್ರಾಸ್ತಾ, ಭೋಜಪ್ಪ ನಾಯ್ಕ್, ರಹೀo ಬೀಜದಕಟ್ಟೆ,ಕೊರಗಪ್ಪ ಐವರ್ನಾಡು, ಕರುಣಾಕರ ಪಳ್ಳತಡ್ಕ, ಇಬ್ರಾಹಿಂ ಜಯನಗರ ಮತ್ತಿತರರು ಇದ್ದರು.





