ಸುಳ್ಯ: ಜಲ ಸಂರಕ್ಷಣೆಯ ಬಗ್ಗೆ , ಕೆರೆಗಳ ಪುನರುಜ್ಜೀವನದ ಬಗ್ಗೆ ಸಂಬಂಧಪಟ್ಟ ತಜ್ಞ ಸಂಪನ್ಮೂಲ ವ್ಯಕಿಗಳ ಭಾಗವಹಿಸುವಿಕೆಯೊಂದಿಗೆ ಸತತ ಕಾಯಕ್ರಮವನ್ನು ಮಾಡುತ್ತಿರುವ ಐಲೇಸಾ ದಿ ವಾಯ್ಸ್ ಆಫ್ ಓಷನ್ ಸಂಸ್ಥೆ ಈ ಬಾರಿ ಮಳೆ ನೀರು ಕೊಯ್ಲು , ಸಂಗ್ರಹಣೆ ಮತ್ತು ನೀರನ್ನು ಭೂಮಿಗೆ ಇಂಗಿಸುವ ಬಗ್ಗೆ ಗಮನ ಹರಿಸಿದೆ .
ಸಿರಸಿಯ ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ
ಕೇಂದ್ರದ ನಿರ್ದೇಶಕರಾಗಿರುವ ಜೈವಿಕ ವಿಜ್ಞಾನಿ ಡಾ. ಕೇಶವ ಹೆಗ್ಡೆ ಕೊರ್ಸೆ ಇವರು ನೀರಿನ ಕೊಯ್ಲಿನ ಪ್ರಾಮುಖ್ಯತೆ , ಮನೆ ಮನೆಗಳಲ್ಲಿ ಮಳೆ ನೀರಿನ ಸಂಗ್ರಹಣೆ ಮತ್ತು ಬಳಕೆ ಹಾಗೂ ಮಳೆಯ ನೀರನ್ನು ಅಂತರ್ಜಲವಾಗಿ ಭೂಮಿಗಿಳಿಸುವ ವೈಜ್ಞಾನಿಕ ಪ್ರಕ್ರಿಯೆಗಳ ಬಗ್ಗೆ ತಿಳಿಸಿಕೊಡಲಿದ್ದಾರೆ . ಜೂ.2 ರಂದು ಸಂಜೆ 7:30 ಗಂಟೆಗೆ zoom virtual ವೇದಿಕೆಯಲ್ಲಿ ಐಲೇಸಾದ ಅನಂತ್ ರಾವ್ ನಡೆಸಿಕೊಡಲಿದ್ದು ಎಲ್ಲಾ ಆಸಕ್ತ ನಾಗರೀಕರು , ವಿದ್ಯಾರ್ಥಿಗಳು Zoom Meeting Id:81978777104 ಮತ್ತು Passcode: ilesa ಬಳಸಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
ಕಾರ್ಯಕ್ರಮದಲ್ಲಿ ಭಾಗವಹಿಸಲು ಜುಲೈ 2 ರಂದು ಸಂಜೆ 07:30ಕ್ಕೆ ಕೆಳಗೆ ನಮೂದಿಸಿದ ಲಿಂಕ್ ಮೂಲಕ ಭಾಗವಹಿಸಿ, ಮಾಹಿತಿ ಪಡೆಯ ಬಹುದು ಎಂದು ಎಂದು ಐಲೇಸಾದ ಶಾಂತಾರಾಮ್ ಶೆಟ್ಟಿ ತಿಳಿಸಿದ್ದಾರೆ.
https://us06web.zoom.us/j/81978777104?pwd=UmZISXc3RUR3Q2s5TEFCVWlEYXJmdz09