ಸುಳ್ಯ: ಇತ್ತೀಚೆಗೆ ಅಗಲಿದ ಜಿ.ಪಂ.ಮಾಜಿ ಸದಸ್ಯ ಹಾಗೂ ಬಿಜೆಪಿ ನವೀನ್ ಕುಮಾರ್ ರೈ ಅವರ ಉತ್ತರ ಕ್ರಿಯಾಧಿ ಸದ್ಗತಿ ಕಾರ್ಯಕ್ರಮ ಹಾಗೂ ಸಾರ್ವಜನಿಕ ಶ್ರದ್ಧಾಂಜಲಿ, ನುಡಿ ನಮನ ಕಾರ್ಯಕ್ರಮ ಸುಳ್ಯ ಕೇರ್ಪಳ ಬಂಟರ ಭವನದಲ್ಲಿ ಮೇ.28 ರಂದು ನಡೆಯಿತು. ಮಾಜಿ ಸಚಿವ ಎಸ್.ಅಂಗಾರ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪ್ರಮುಖರಾದ
ಚಂದ್ರಶೇಖರ ತಳೂರ್, ಜಯಪ್ರಕಾಶ್ ರೈ , ಡಾ.ಪ್ರಭಾಕರ ಶಿಶಿಲ, ಡಾ. ಯಶೋಧ ರಾಮಚಂದ್ರ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ವಿಶ್ವನಾಥ ರೈ ನುಡಿನಮನ ಸಲ್ಲಿಸಿದರು. ಹಿರಿಯರಾದ ಬಾಲಕೃಷ್ಣ ಆಳ್ವ ಕಲ್ಕಿ ಭಗವಾನ್ ರವರ ಶಾಂತಿ ಮಂತ್ರ ಬೋಧಿಸಿದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.
ನವೀನ್ ರೈ ಅವರ ಪತ್ನಿ ಹಾಗೂ ಮಕ್ಕಳು, ಸಹೋದರ, ಸಹೋದರಿಯರು,ಕುಟುಂಬಸ್ಥರು ಹಾಗೂ ಅಪಾರ ಬಂಧು -ಮಿತ್ರರು, ವಿವಿಧ ಪಕ್ಷದ ನಾಯಕರುಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.