ಚೊಕ್ಕಾಡಿ:ಎಲಿಮಲೆಯ ರಂಜನಿ ಸಂಗೀತ ಸಭಾದ ವತಿಯಿಂದ ಶ್ರೀರಾಮ ಸೇವಾ ಸಮಿತಿ ಚೊಕ್ಕಾಡಿ ಇದರ ಸಹಕಾರದೊಂದಿಗೆ ‘ನವರಾತ್ರಿ ವೈಭವಂ’ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಛೇರಿ ಅ.4ರಂದು ಚೊಕ್ಕಾಡಿ ಶ್ರೀರಾಮ ದೇವಾಲಯದ ದೇಸೀ ಭವನದಲ್ಲಿ ನಡೆಯಿತು. ರಂಜನಿ ಸಂಗೀತ ಸಭಾದ ವತಿಯಿಂದ ಪ್ರತಿವರ್ಷ ನವರಾತ್ರಿ ಸಂದರ್ಭದಲ್ಲಿ
ವಿಶೇಷ ಸಂಗೀತ ಕಛೇರಿಯನ್ನು ಏರ್ಪಡಿಸಲಾಗುತ್ತದೆ. ಈ ಬಾರಿಯ ‘ನವರಾತ್ರಿ ವೈಭವಂ’ ನಲ್ಲಿ ವಿದುಷಿ ಅಶ್ವಿನಿ ಭಟ್ ಕೋಳಿಕ್ಕಜೆ ಅವರ ಹಾಡುಗಾರಿಕೆ ಸಂಗೀತಾಸಕ್ತರ ಮನಗೆದ್ದಿತು.
ವಯಲಿನ್ನಲ್ಲಿ ವಿದುಷಿ ಸಿ.ವಿ. ಶ್ರುತಿ ಮೈಸೂರು, ಮೃದಂಗದಲ್ಲಿ ವಿದ್ವಾನ್ ನಂದನ್ ಕಶ್ಯಪ್ ಮೈಸೂರು ಮೋರ್ಸಿಂಗ್ನಲ್ಲಿ ವಿದ್ವಾನ್ ಬಾಲಕೃಷ್ಣ ಭಟ್ ಹೊಸಮನೆ ಪುತ್ತೂರು ಮೋಡಿ ಮಾಡಿದರು.

ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್ ನವರಾತ್ರಿ ವೈಭವಂ ಸಂಗೀತ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಸಿಎ ಗಣೇಶ್ ಭಟ್, ವಿದ್ವಾನ್ ಹರಿಹರ ಬಾಯಾಡಿ,ರಂಜನಿ ಸಂಗೀತ ಸಭಾದ ಗುರುಗಳಾದ ರೇಖಾ ರೇವತಿ ಹೊನ್ನಾಡಿ ಹಾಗು ನಿರ್ದೇಶಕರಾದ ಸತ್ಯನಾರಾಯಣ ಹೊನ್ನಾಡಿ ಉಪಸ್ಥಿತರಿದ್ದರು. ರೇಖಾ ರೇವತಿ ಹೊನ್ನಾಡಿ ಹಾಗು ಸತ್ಯನಾರಾಯಣ ಹೊನ್ನಾಡಿ ಅವರು ಸಂಗೀತ ಕಛೇರಿ ನಡೆಸಿಕೊಟ್ಟ ಕಲಾವಿದರನ್ನು ಗೌರವಿಸಿದರು.












