ಸುಳ್ಯ:ರಾಜಸ್ಥಾನ ಜಯ್ಪುರದ ಎಸ್ಎಂಎಸ್ ಇಂಡೋರ್ ಸ್ಟೇಡಿಯಂನಲ್ಲಿ ನಡೆದ 2ನೇ ಸಬ್ ಜ್ಯೂನಿಯರ್, ಜ್ಯೂನಿಯರ್ ‘ಇಂಡಿಯಾ ಟೇಕ್ವಾಂಡೋ’ ರಾಷ್ಟ್ರೀಯ ರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್ಶಿಪ್ನಲ್ಲಿ ಸಮೃದ್ಧ್ ಬಿ.ಎಲ್.ಗೆ ಕಂಚಿನ ಪದಕ ಚಾಂಪಿಯನ್ಶಿಪ್ನಲ್ಲಿ ಸಮೃದ್ಧ್ ಬಿ.ಎಲ್. ಸಬ್ ಜ್ಯೂನಿಯರ್ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಕಲ್ಲಪಳ್ಳಿ ಆಲುಗುಂಜದ ತನುಜ ಎ.ಪಿ.ಹಾಗೂ ಲಕ್ಷ್ಮೀಶ ದಂಪತಿಗಳ ಪುತ್ರನಾದ ಸಮೃದ್ಧ್ ಬೆಂಗಳೂರಿನ

ಎನ್.ಎಂ.ಎಚ್. ಗ್ಲೋಬಲ್ ಸ್ಕೂಲ್ನ 5ನೇ ತರಗತಿಯ ವಿದ್ಯಾರ್ಥಿ.ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ 40ನೇ ಟೇಕ್ವಾಂಡೋ ಚಾಂಪಿಯನ್ಶಿಪ್ನಲ್ಲಿ ಸಬ್ ಜ್ಯೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದು ಮಿಂಚಿದ್ದ ಸಮೃದ್ಧ್ ರಾಷ್ಟ್ರ ಮಟ್ಟದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಎರಡು ವರ್ಷಗಳಿಂದ ಟೇಕ್ವಾಂಡೋ ಅಭ್ಯಾಸ ನಡೆಸುತ್ತಿರುವ ಈತ ರಾಜ್ಯಮಟ್ಟದಲ್ಲಿ 3 ಬಾರಿ ಚಿನ್ನದ ಪದಕ ಪಡೆದಿದ್ದಾರೆ.ಎನ್.ಎಂ.ಎಚ್. ಸ್ಕೂಲ್ನ ಇನ್ಸ್ಸ್ಟ್ರಕ್ಟರ್ ವೆಟ್ರಿವೇಲ್ ಅವರು ಟೇಕ್ವಾಂಡೋ ತರಬೇತಿ ನೀಡುತ್ತಾರೆ.









