ಸುಳ್ಯ:ಸುಳ್ಯದಲ್ಲಿ ನಡೆಯುತ್ತಿರುವ ಪ್ರೊ ಮಾದರಿಯ ರಾಷ್ಟ್ರೀಯ ಕಬಡ್ಡಿ ಪಂದ್ಯಾಟದ ಮೊದಲ ಪಂದ್ಯದಲ್ಲಿ ಯೇನೆಪೋಯ ಯೂನಿವರ್ಸಿಟಿ ತಂಡ ಮೊದಲ ಗೆಲುವು ದಾಖಲಿಸಿದೆ. ಮೊದಲ ಪಂದ್ಯದಲ್ಲಿ ಯೇನೆಪೋಯ ತಂಡ ಪೆರಿಯಾರ್ ಸ್ಪೋರ್ಟ್ಸ್ ಕ್ಲಬ್ ಎಕೆಎಂಸಿ ಗೋಬಿ ವಿರುದ್ಧ 21-15 ಅಂಕಗಳ ಅಂತರದ ಗೆಲುವು ಸಾಧಿಸಿ ಶುಭಾರಂಭ ಮಾಡಿತು. ಸಮಬಲದ ಜಿದ್ದಾ ಜಿದ್ದಿನ ಹೋರಾಟ ನಡೆಸಿದ ಎರಡೂ ತಂಡಗಳು ಆಕರ್ಷಕ ಕಬಡ್ಡಿಯ ರಸದೌತಣ ನೀಡಿತು.
ಮೊದಲ ದಿನ ಎಂಟು ಪಂದ್ಯಗಳು ನಡೆಯಲಿದೆ. ಎರಡನೇ ಪಂದ್ಯದಲ್ಲಿ ತಮಿಳುನಾಡಿನ ದೊರೈ ಸಿಂಗಂ ತಂಡ ಪಟ್ಲ ಪ್ರೆಂಡ್ಸ್ ತಂಡವನ್ನು ಎದುರಿಸಲಿದೆ.









