ಸುಳ್ಯ: ಡಿಸೆಂಬರ್ 31 ರಂದು ದೆಹಲಿಯಿಂದ ನಡೆಯುವ ಆದ್ಮಿ ಪಾರ್ಟಿಯ 12 ನೇ ರಾಷ್ಟ್ರೀಯ ಸಮಿತಿ ಸಭೆಯಲ್ಲಿ ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಸಮಿತಿ ಸದಸ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಅಧ್ಯಕ್ಷ ಅಶೋಕ ಎಡಮಲೆ ಅವರು ಭಾಗವಹಿಸಲಿದ್ದಾರೆ.ಕರ್ನಾಟಕ ದಿಂದ
ರಾಷ್ಟ್ರೀಯ ಸಮಿತಿಯಲ್ಲಿ ಅಶೋಕ್ ಎಡಮಲೆ ಸೇರಿ 8 ಮಂದಿ ಸದಸ್ಯರಿದ್ದಾರೆ. 2021 ರಲ್ಲಿ ನಡೆದ ರಾಷ್ಟ್ರೀಯ ಸಮಿತಿ ಸದಸ್ಯರ ಆಯ್ಕೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಷ್ಟ್ರೀಯ ಸಮಿತಿ ಸದಸ್ಯರಾಗಿ 3 ವರ್ಷದ ಅವಧಿಗೆ ಅಯ್ಕೆಯಾಗಿದ್ದರು. ಕಳೆದ ಬಾರಿ 2022 ರಲ್ಲಿ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು,
ಸುಳ್ಯ ವಿಧಾನಸಭಾ ಅಧ್ಯಕರಾಗಿ, ರಾಜ್ಯ ವಿದ್ಯಾರ್ಥಿ ಹಾಗೂ ಯುವ ಘಟಕದ ರಾಜ್ಯ ಕಾರ್ಯಕಾರಿ ಸಮಿತಿ ಹಾಗೂ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವೀಕ್ಷಕರಾಗಿಯೂ, ಕಾರ್ಯ ನಿರ್ವಹಿಸಿದ್ದರು, ರಾಜ್ಯದಿಂದ ಮಾದ್ಯಮ ಚರ್ಚೆಯಲ್ಲಿಯೂ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ.