ಮುಂಬೈ:ನಾಸಾದ ವತಿಯಿಂದ ಆಯೋಜಿಸಲಾದ ಕಾನ್ಫರೆನ್ಸ್ನಲ್ಲಿ ಖ್ಯಾತ ಪರಿಸರ ತಜ್ಞ, ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್ ಅವರು ಭಾಗವಹಿಸಿ ಪ್ರಬಂಧ ಮಂಡಿಸಿದ್ದಾರೆ. ಆನ್ಲೈನ್ ಮೂಲಕ ನಾಸಾ ಏರ್ಪಡಿಸಿದ ಕಾನ್ಫರೆನ್ಸ್ನಲ್ಲಿ ವಿಶ್ವದ ವಿವಿಧ ಭಾಗಗಳ ವಿಜ್ಞಾನಿಗಳು ಹಾಗೂ ತಜ್ಞರು ಭಾಗವಹಿಸಿದ್ದಾರೆ. ಜಾಗತಿಕ ತಾಪಮಾನದ ನಿಯಂತ್ರಣದ
ಬಗ್ಗೆ ನಡೆದ ಕಾನ್ಫರೆನ್ಸ್ನಲ್ಲಿ ಜಾಗತಿಕ ತಾಪಮಾನ ನಿಯಂತ್ರಣದಲ್ಲಿ ಮಿಯಾವಾಕಿ ಅರಣ್ಯದ ಪಾತ್ರದ ಬಗ್ಗೆ ಚರ್ಚೆ ನಡೆಯಿತು. ಮಿಯಾವಾಕಿ ಮಾದರಿಯ ಅರಣ್ಯ ಬೆಳೆಸುವುದರಿಂದ ಭೂಮಿಗೆ, ಜೀವರಾಶಿಗಳಿಗೆ ಮತ್ತು ಮುಂದಿನ ಜನಾಂಗಕ್ಕೆ ಆಗುವ ಪ್ರಯೋಜನಗಳ ಕುರಿತು ಡಾ.ಆರ್.ಕೆ.ನಾಯರ್ ಮಾತನಾಡಿದರು. ಮಿಯಾವಾಕಿ ಮಾದರಿಯಲ್ಲಿ ಅರಣ್ಯೀಕರಣ ನಡೆಸುವ ತಮ್ಮ ಅನುಭವಗಳ ಬಗ್ಗೆಯೂ ಅವರು ವಿವರಿಸಿದರು. ಮಿಯಾವಾಕಿ ಅರಣ್ಯದ ಬಗ್ಗೆ ನಾಸಾ ನಡೆಸುವ ಸರ್ವೆಯ ಭಾಗವಾಗಿ ಕಾನ್ಫರೆನ್ಸ್ ಏರ್ಪಡಿಸಲಾಗಿದೆ. ವರ್ಚುವಲ್ ಆಗಿ ಕಾನ್ಪರೆನ್ಸ್ನಲ್ಲಿ ಮಾತನಾಡಿದ ಆರ್.ಕೆ.ನಾಯರ್ ಅವರು ಕೊನೆಯಲ್ಲಿ ತುಳುವಿನಲ್ಲಿ ನಾಸಾಗೆ ಧನ್ಯವಾದ ಸಮರ್ಪಿಸಿದರು.









