ಇಂಫಾಲ್: ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭೇಟಿ ನೀಡಿದ್ದಾರೆ.ಚುರಾಚಾಂದಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಅವರು 7,300 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ
ಶಂಕುಸ್ಥಾಪನೆ ನೆರವೇರಿಸಿದ್ದಾರೆ.ಮಣಿಪುರದಲ್ಲಿ ಅಂದಾಜು 8,500 ಕೋಟಿ ಮೊತ್ತದ 31 ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ಅವರು ನೆರವೇರಿಸಲಿದ್ದಾರೆ. ಮಣಿಪುರ ಇನ್ನು ಅಭಿವೃದ್ಧಿಯ ದಿಸೆಯಲ್ಲಿ ಮುನ್ನಡೆಯಲಿದೆ.ಮಣಿಪುರದಲ್ಲಿ ಅಭಿವೃದ್ಧಿ ನಡೆಸಲು ಕೇಂದ್ರ ಸರಕಾರ ಬದ್ಧ ಎಂದು ಅವರು ಹೇಳಿದರು. ಮಣಿಪುರದಿಂದ ಬಳಿಕ ಮೋದಿ ಅವರು ಅಸ್ಸಾಂಗೆ ಭೇಟಿ ನೀಡಲಿದ್ದಾರೆ.












